ಒಬ್ಬ ಹುಡುಗ ವಕೀಲರ ಆಫೀಸಿಗೆ ಫೋನ್ ಮಾಡಿ 'ನನಗೆ ನನ್ನ ವಕೀಲರ ಹತ್ತಿರ ಮಾತನಾಡಬೇಕು' ಎನ್ನುತ್ತಾನೆ. ರಿಸೆಪ್ಷನಿಸ್ಟ್ 'ಕ್ಷಮಿಸಿ, ಅವರು ಕಳೆದ ವಾರ ತೀರಿಕೊಂಡರು' ಎಂದುತ್ತರಿಸುತ್ತಾಳೆ. ಮರುದಿನ ಮತ್ತೆ ಅವನು ಕಾಲ್ ಮಾಡಿ ಅದನ್ನೇ ಕೇಳುತ್ತಾನೆ. ರಿಸೆಪ್ಷನಿಸ್ಟ್ 'ನಾನು ನಿನ್ನೆ ಹೇಳಿದೆನಲ್ಲ, ಅವರು ಕಳೆದ ವಾರ ತೀರಿಕೊಂಡರು ಎಂದು' ಎಂದು ಹೇಳುತ್ತಾಳೆ. ಆ ಹುಡುಗ ಮತ್ತೆ ಮರುದಿನ ಕಾಲ್ ಮಾಡಿ ಮತ್ತೆ ಅದನ್ನೇ ಕೇಳಿದಾಗ ರಿಸೆಪ್ಷನಿಸ್ಟ್ ಸಿಟ್ಟುಗೊಂಡು 'ಅವರು ಕಳೆದ ವಾರವೇ ತೀರಿಕೊಂಡರು ಎಂದು ನಾನು ಹೇಳುತ್ತಲೇ ಇದ್ದೇನೆ ನೀವು ಕೇಳುತ್ತಲೇ ಇದ್ದೀರಲ್ಲ ಯಾಕೆ?' ಎಂದು ಕೇಳುತ್ತಾನೆ. ಅದಕ್ಕೆ ಹುಡುಗ 'ಏಕೆಂದರೆ ಅದನ್ನು ಕೇಳಲು ನಾನು ಇಷ್ಟಪಡುತ್ತೇನೆ'.