ಸಣ್ಣ ಹುಡುಗಿ ಅವಳ ಟೀಚರ್‌ನೊಂದಿಗೆ ತಿಮಿಂಗಿಲದ ಬಗ್ಗೆ ಕೇಳುತ್ತಿದ್ದಳು. ತಿಮಿಂಗಿಲ ಅಷ್ಟು ದೊಡ್ಡದಿದ್ದರೂ ಸಹ ಅದಕ್ಕೆ ಮನುಷ್ಯನನ್ನು ನುಂಗಲು ಸಾಧ್ಯವಿಲ್ಲ ಯಾಕೆಂದರೆ ಅದರ ಗಂಟಲು ತುಂಬಾ ಸಣ್ಣದು ಎಂದು ಟೀಚರ್ ವಿವರಿಸುತ್ತಿದ್ದರು. ಜಾನ್‌ನನ್ನು ತಿಮಿಂಗಿಲ ನುಂಗಿತು ಎಂದು ಹುಡುಗಿ ಹೇಳಿದಾಗ, ಟೀಚರ್ ತಿಮಿಂಗಿಲ ಮನುಷ್ಯನನ್ನು ನುಂಗುವುದಿಲ್ಲ ಎಂದು ಮತ್ತೆ ತಿದ್ದಿದ್ದರು. ಆಗ ಹುಡುಗಿ 'ನಾನು ಸ್ವರ್ಗಕ್ಕೆ ಹೋದಾಗ ಅವನನ್ನು ಕೇಳುತ್ತೇನೆ'. ಅದಕ್ಕೆ ಟೀಚರ್ 'ಒಂದು ವೇಳೆ ಅವನು ನರಕಕ್ಕೆ ಹೋದರೆ?' ಎಂದಾಗ, ತುಂಟ ಹುಡುಗಿ 'ಆಗ ನೀವು ಕೇಳಿ' ಎಂದಳು.