Article Jokes In Kannada %e0%b2%85%e0%b2%aa%e0%b2%98%e0%b2%be%e0%b2%a4 110080600073_1.htm

Select Your Language

Notifications

webdunia
webdunia
webdunia
webdunia

ಅಪಘಾತ

ಕನ್ನಡ ಜೋಕ್
"ನವದಂಪತಿಗಳು ಕಾರಿನ ಅಪಘಾತಕ್ಕೊಳಗಾದ್ದರಿಂದ, ಪತ್ನಿಯ ಮುಖಕ್ಕೆ ತುಂಬಾ ಪೆಟ್ಟಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕೆನ್ನೆಗೆ ಹೆಚ್ಚು ಪೆಟ್ಟು ಬಿದ್ದಿದ್ದರಿಂದ ಬೇರೆ ದಾರಿ ಇಲ್ಲದೆ ಬೇರೆ ಮಾಂಸದಿಂದ ಬದಲಿಸಬೇಕಿತ್ತು, ಆದರೆ ಅವಳು ತುಂಬಾ ತೆಳುವಾಗಿದ್ದ ಕಾರಣ ಪತಿಯಿಂದ ಪಡೆಯುವುದು ಎಂದು ನಿಶ್ಚಿಯಲಾಯಿತು. ಆದರೆ ಡಾಕ್ಟರ್ ಪ್ರಕಾರ ಅವನ ಎಲ್ಲಾ ಭಾಗದ ಮಾಂಸಕ್ಕಿಂತ ಕುಂಡೆಯ ಮಾಂಸ ಉತ್ತಮವೆನಿಸಿತು. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಗಂಡ-ಹೆಂಡತಿ ನಿಶ್ಚಯಿಸಿದರು. ಡಾಕ್ಟರೂ ಕೂಡ ಇದನ್ನು ಗೌಪ್ಯವಾಗಿ ಇಡಬೇಕೆಂಬ ಒಪ್ಪಂದಕ್ಕೆ ಬರಲಾಯಿತು. ಸರ್ಜರಿ ಮುಗಿದ ಮೇಲೆ ಅವಳ ಸೌಂದರ್ಯ ಇಮ್ಮಡಿಯಾಗಿತ್ತು. ಎಲ್ಲರಿಗೂ ಆಶ್ಚರಿಯೇ. ಸ್ನೇಹಿತೆಯರ ಪ್ರಶಂಸೆಗಳೂ ಬಂದವು.
ಒಂದು ದಿನ, ಅವರಿಬ್ಬರೂ ಏಕಾಂತದಲ್ಲಿರುವಾಗ, ಅವನ ತ್ಯಾಗಕ್ಕೆ ಪೂರಕವಾಗಿ, 'ರೀ, ನಿಮ್ಮ ಸಹಾಯಕ್ಕೆ ಹೇಗೆ ನಾನು ಅಭಿನಂದನೆ ಸಲ್ಲಿಸಬೇಕೆಂದು ತಿಳಿಯುತ್ತಿಲ್ಲ. ನಿಮ್ಮ ಋಣವನ್ನು ಹೇಗೆ ತಿರಿಸುವುದು ಎಂದು ತಿಳಿಯುತ್ತಿಲ್ಲ' ಎಂದು ಖುಷಿಯಿಂದ ಹೇಳಿದಳು.
ಅದಕ್ಕೆ ಪತಿಯು 'ಪರವಾಗಿಲ್ಲ ಚಿನ್ನ, ನಿನ್ನ ಆ ಅಭಿನಂದನೆಗಳನ್ನು ನಿನ್ನ ಅಮ್ಮ ನಿನ್ನ ಕೆನ್ನೆಗೆ ಮುತ್ತು ಕೊಡುವುತ್ತಿರುವುದನ್ನು ಪ್ರತಿ ಬಾರಿ ನೋಡಿದಾಗಲೂ ಪಡೆಯುತ್ತಿದ್ದೇನೆ' ಎಂದನು!"

Share this Story:

Follow Webdunia kannada