ತಂದೆ ಮಗನ ಅತೀವ ಚೇಷ್ಟೆಗಳಿಗಾಗಿ ಸರಿಯಾಗಿ ಬೈದುದಕ್ಕಾಗಿ ಮಗ ಹಿಂದಿರುಗಿ ಬಿದ್ದನು. 'ನಾನು ಮನೆ ಬಿಟ್ಟು ಓಡಿ ಹೋಗುತ್ತಿದ್ದೇನೆ' ಎಂದು ಹೇಳಿ ಸ್ವಲ್ಪ ಬಟ್ಟೆ, ಟೆಡ್ಡಿ ಬಿಯರ್ ಅನ್ನು ಹಿಡಿದುಕೊಂಡು ಹೊರಹೋದನು. ಯಾವುದೇ ಬೇಸರವನಿಲ್ಲದೆ ತಂದೆ 'ಹಸಿವಾದರೆ ಏನು ಮಾಡುತ್ತೀ?' ಎಂದು ಕೇಳಿದನು. ಮಗ 'ಆಗ ಮನೆಗೆ ಬಂದು ಊಟ ಮಾಡುತ್ತೇನೆ' ಎಂದುತ್ತರಿಸಿದನು. ತಂದೆ 'ಹಣ ಬೇಕಾದರೆ ಏನು ಮಾಡುತ್ತೀ?' ಎಂದು ಮತ್ತೆ ಕೇಳಿದರು. ಮಗ ಯಾವುದೇ ಮುಲಾಜಿಲ್ಲದೆ 'ಮನೆಗೆ ಬಂದು ತೆಗೆದುಕೊಂಡು ಹೋಗುತ್ತೇನೆ' ಎಂದನು. ಆಗ ತಂದೆಗೆ ನಿಜಸ್ಥಿತಿಯ ಅರಿವಾಗಿ 'ಇವನು ಮನೆ ಬಿಟ್ಟು ಓಡಿ ಹೋಗುತ್ತಿಲ್ಲ ಶಾಲೆ ಬಿಟ್ಟು ಹೋಗುತ್ತಿದ್ದಾನೆ' ಎಂದನು.