"ಮಹಿಳೆ: ಡಾಕ್ಟರ್, ನನಗೆ ಏನಾಗಿದೆ ಅಂತ ಗೊತ್ತಿಲ್ಲ. ತುಂಬಾ ತಲೆನೋವು, ಕಣ್ಣೇ ಕಾಣಿಸುತ್ತಿಲ್ಲ, ಕಿವಿಯೂ ಸರಿಯಾಗಿ ಕೇಳಿಸುತ್ತಿಲ್ಲ, ಶೀತ ಬೇರೆ, ಹೈ ಬ್ಲಡ್ ಪ್ರೆಶರ್, ಹೊಟ್ಟೆ ನೋವು, ಹೈ ಶುಗರ್ ಮತ್ತು ಯಾವಾಗಲೂ ಚಳಿಯಿಂದ ನಡುಗುತ್ತಿರುತ್ತೇನೆ.
ಇವೆಲ್ಲವನ್ನೂ ಕೇಳಿದ ಡಾಕ್ಟರ್ ಫೋನ್ ತೆಗೆದು ನಂಬರ್ ಡೈಯಲ್ ಮಾಡುತ್ತಾರೆ. ಆ ಮಹಿಳೆ ಕುತೂಹಲದಿಂದ 'ನನ್ನ ರೋಗದ ಬಗ್ಗೆ ನೀವು ಮತ್ತೊಬ್ಬ ಡಾಕ್ಟರ್ ಹತ್ತಿರ ಮಾತನಾಡುತ್ತೀರ?' ಎಂದು ಕೇಳುತ್ತಾಳೆ. ಡಾಕ್ಟರ್ 'ಅಲ್ಲ. ನಿಮ್ಮ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಫೋನ್ ಮಾಡುತ್ತಿದ್ದೇನೆ.'"