ಮ್ಯಾನೇಜರ್- ನಿನ್ನ ಅರ್ಜಿಯಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಕಡೆ ಕೆಲಸ ಮಾಡಿರುವುದಾಗಿ ಕಾಣಿಸಿರುವೆ.
ಅರ್ಜಿದಾರ- ಹೌದು ಸಾರ್, ನನಗೆ ಅಷ್ಟೊಂದು ಬೇಡಿಕೆ ಇದೆ ಎನ್ನುವುದನ್ನು ಅದು ತೋರಿಸುತ್ತದೆ.
ಆಫೀಸರ್- ನೋಡಿ ರಾಯರೆ ಆಫಿಸನ್ನು ಒಂದು ದೇವಸ್ಥಾನ ಅಂತ ಭಾವಿಸಿಕೊಂಡು ಕೆಲಸ ಮಾಡಬೇಕು.
ರಾಯರು- ಸರಿ ಸಾರ್!.... ಯಾರಾದರೂ ದಕ್ಷಿಣೆ ಕೊಟ್ಟರೆ ಸ್ವಿಕರಿಸಬಹುದಾ?
ಮ್ಯಾನೇಜರ್- ಇಂದಿನ ಪೇಪರ್ ಎಲ್ಲೋ ?
ನೌಕರ- ಅದನ್ನೆ ನಿನ್ನೆಯಿಂದ ಹುಡುಕುತ್ತಿದ್ದೇನೆ, ಸಿಗಲೋಲ್ಲದು ಸಾರ್.