`
ಕಸ್ಟಮರ್: ಏನ್ರಿ ಸಾರ್ ... 2 ರೂಪಾಯಿಗೆ ಕಿವಿ ಮೆಷಿನ್ ಸಿಗುತ್ತಾ?
(ಅಂಗಡಿಯವನು ಕೋಪದಿಂದ ತೆಗೆದುಕೊಡುತ್ತಾನೆ)
ಕಸ್ಟಮರ್: ಇದು ಹೇಗೆ ಸಾರ್ ಕೆಲಸ ಮಾಡುತ್ತೆ?
ಅಂಗಡಿಯವನು: ಇದು ಕೆಲಸ ಮಾಡೋದಿಲ್ಲ . . . ಆದರೆ ಇದು ನಿಮ್ಮ ಕಿವಿಯಲ್ಲಿ ಇರುವುದನ್ನು ನೋಡಿದ ತಕ್ಷಣ ನಿಮಗೆ ಕಿವಿ ಕೇಣಿಸುವುದಿಲ್ಲ ಎಂದು ನಿಮ್ಮ ಹತ್ತಿರ ಎಲ್ಲರೂ ಗಟ್ಟಿಯಾಗಿ ಮಾತನಾಡುತ್ತಾರೆ.`
`ಹುಲಿ ಒಂದು ಅಟ್ಟಿಸಿಕೊಂಡು ಬಂದು ನನ್ನ ತಿನ್ನುವಂತೆ ಕನಸು ಕಂಡೆ . . . ಒಳ್ಳೆಯದೊ, ಕೆಟ್ಟದೊ ಅಂಥಾನೆ ತಿಳಿದಿಲ್ಲ!
ಒಳ್ಳೆಯದೇ ಕಣೋ . . . ಏಕೆಂದರೆ . . . ಕನಸು ಆಗಿರುವುದಕ್ಕೇ ನೀನು ತಪ್ಪಿಸಿಕೊಂಡೆ!`
`ಬಿಸಿಲು ಸ್ವಲ್ಪ ಜಾಸ್ತಿಯಾಗಿಯೇ ಇದೆ . . . ಅದಕ್ಕೆ ಅವರು ಹೀಗಾ ಮಾತಾಡೋದು.
ಏನು ಹೇಳಿದರು?
ಹಾರಾಡೋದೆಲ್ಲಾ ಕಾಗೆ ಅಲ್ಲವಂತೆ . . . ಬಿಳಿ ಪಾರಿವಾಳಗಳು ಬಿಸಿಲಿಗೆ ಕಪ್ಪಾಗಿ ಕಾಗೆ ರೀತಿ ಆಗಿದೆ . . . ಇದು ಹೇಗೆ ಸಾಧ್ಯ?`