Select Your Language

Notifications

webdunia
webdunia
webdunia
webdunia

ಮೂರ್ಖರು

ಮೂರ್ಖರು
ಚೆನ್ನೈ , ಗುರುವಾರ, 20 ನವೆಂಬರ್ 2014 (15:06 IST)
1
ಗಂಡ: ನಿನ್ನ ಜತೆಗೆ ಮಾತಾಡೋರು, ವಾದ ಮಾಡೋರು, ಕೂಗಾಡೋರು ಮೂರ್ಖರು ಅಂತ ಈಗ ಗೊತ್ತಾಯ್ತು.
ಹೆಂಡತಿ: ನಾನು ಯಾರ ಜತೆ ಸಂಸಾರ ಮಾಡ್ತಿದ್ದೀನಿ ಅಂತ ನನಗೂ ಈಗ ಗೊತ್ತಾಯ್ತು.
 
2
ಪೊಲೀಸ್: ನೀವು ನಿಮ್ಮ ಗಂಡನಿಗೆ ವಿಷ ಹಾಕಿ ಕೊಂದಿದ್ದೇಕೆ?
ಶ್ರೀಮತಿ: ಇದ್ದಿದ್ರಲ್ಲಿ ಅದೇ ಸುಲಭ ಅನಿಸಿದ್ರಿಂದ!
 
3
ಸ್ವಾಮಿ: ನೀವು ಮನೆ ಕಟ್ಟಿದ್ರಲ್ಲ ಬ್ಯಾಂಕ್ ಸಾಲನೋ ಕೈಸಾಲನೋ...
ರಾಜ: ಕೈಸಾಲ ಎಲ್ಲಿ ಸಾಕಾಗುತ್ತೆ? ಮೈ ಪೂರ್ತಿ ಸಾಲ ಆಯ್ತು ಮಾರಾಯಾ...
 
4
ಟಿ.ಟಿ: ಏನಯ್ಯಾ ಆರ್ಡಿನರಿ ಟ್ರೇನ್ ಟಿಕೆಟ್ ತಗೊಂಡಿದಿಯಾ, ಇದು ಎಕ್ಸ್‌ಪ್ರೆಸ್ ಗೊತ್ತಿಲ್ವೆ?
ಪ್ರಯಾಣಿಕ: ಎನ್ಮಾಡ್ಲಿ ಸ್ವಾಮಿ? ನನ್ತಪ್ಪೆ? ಡ್ರೈವರ್ಗೆ ಹೇಳಿ, ನಿಧಾನವಾಗಿ ಓಡಿಸು ಅಂತ.
 
5
ಪ್ರಯಾಣಿಕ: ಸ್ವಾಮಿ ಕಂಡಕ್ಟರೇ, ಈ ಬಸ್ಸು ಎಲ್ಲಿ ನಿಲ್ಲುತ್ತೆ?
ಕಂಡಕ್ಟರ್: ಡೀಸೆಲ್ ಕಡಿಮೆ ಇದೆ ಸಾರ್. ಎಲ್ಲಿ ನಿಲ್ಲುತ್ತೇಂತ ಹೇಳೋದೇ ಕಷ್ಟ.
 
6
ಪ್ರಶ್ನೆ: ಹಲ್ಲಿಲ್ಲದ ನಾಯಿ ಕಚ್ಚಿದರೆ ಏನು ಮಾಡಬೇಕು?
ಉತ್ತರ: ಸಿಂಪಲ್, ಸೂಜಿಯಿಲ್ಲದ ಇಂಜೆಕ್ಷನ್ ತೆಗೆದುಕೊಂಡರಾಯ್ತು.
 
7
ಆತ: ನಾನು ಮುಂದಿನ ಜನ್ಮದಲ್ಲಿ ಜಿರಳೆ ಆಗಿ ಹುಟ್ಟುತ್ತೇನೆ.
ಈತ: ಇದ್ದಕ್ಕಿದ್ದ ಹಾಗೆ ಹೀಗೆ ಹೇಳ್ತಾ ಇದ್ದೀಯಲ್ಲ, ಯಾಕೋ?
ಆತ: ನನ್ನ ಹೆಂಡತಿ ಜಿರಳೆಗೆ ಮಾತ್ರ ಹೆದರುತ್ತಾಳೆ ಮಾರಾಯ, ಅದಕ್ಕೇ.
 
8
ಇಂಗ್ಲಿಷ್ ಕಲಿಯಬೇಕು ಅಂದ್ರೆ ಇಂಗ್ಲಿಷ್ ಚಾನೆಲ್ ಯಾಕೆ ನೋಡ್ತೀಯೆ, ಕನ್ನಡ ಚಾನೆಲ್ ನೋಡು, ಬೇಗ ಕಲಿಯಬಹುದು!
 
9
ಛೇ!! ಹೇಗಂತ ಚವತಿ ಚಂದ್ರನ್ನ ತಪ್ಪಿಸಿಕೊಳ್ಳೋದು? ರಸ್ತೆಯಲ್ಲಿಯ ಪ್ರತಿ ಹೊಂಡದ ನೀರಲ್ಲೂ ಚಂದ್ರ.
 
10
ರಾಮು - ನನಗೆ ನನ್ನ ಹೆಂಡತಿ ಹಲ್ಲುಜ್ಜಿ ಬಂದರೆನೇ ಕಾಫಿ ಕೊಡೋದು.
ಶಾಮು - ಪರವಾಗಿಲ್ಲ ಕಣಯ್ಯ, ನನ್ನ ಹೆಂಡತಿ ನಾನು ಪಾತ್ರೆ ಉಜ್ಜಿಟ್ಟರೇನೆ ಕಾಫಿ ಕೊಡೋದು. 
 
11
ಯಾವ ಸರ್ಕಾರ ಬಂದರೆ ಭಾರತ ನಿಜವಾಗಿಯೂ ಪ್ರಕಾಶಿಸಬಹುದು?
ಟ್ಯೂಬ್‌ಲೈಟ್ ಸರ್ಕಾರ ಬಂದರೆ ಎಲ್ಲಾ ಕಡೆ ಪ್ರಕಾಶಮಾನವಾದ ಬೆಳಕು! ಸ್ಟಾರ್ಟರ್‌ಗಳನ್ನು ವಿರೋಧ ಪಕ್ಷದವರು ಕಿತ್ತು ಚೆಡ್ಡಿ ಬೇಜಲ್ಲಿ ಇಟ್ಟುಕೊಳ್ಳಬಾರದಷ್ಟೆ.
 
12
ತಂದೆ ತಾಯಿಳಿಗೆ ಮಣಿಯದ ಮಗ. ಪತ್ನಿಗೆ ಶರಣಾಗುವನಲ್ಲ. ಏಕೆ ಸಾರ್?
ಹಳೆಯ ನಂದಾದೀಪಕ್ಕಿಂತ ಹೊಸ ಡೂಮ್‌ಲೈಟ್ ಆಕರ್ಷಣೆ ಜಾಸ್ತಿ!
 
13
ಶ್ರೀಮಂತರಾಗಿರುವವರು ಉದಾರಿಗಳಾಗಿರುವುದಿಲ್ಲ ಯಾಕೆ?
ಅವರು ಉದಾರಿಗಳಾಗಿದ್ದಿದ್ದರೆ ಶ್ರೀಮಂತರಾಗಲು ಸಾಧ್ಯವಿರುತ್ತಿರಲಿಲ್ಲ.

Share this Story:

Follow Webdunia kannada