1ಅಂಗಡಿ ಮಾಲೀಕ: ಈ ಕಂಪ್ಯೂಟರ್ ನಿಮ್ಮ ಕೆಲಸವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ
ಗಿರಾಕಿ: ಹಾಗಿದ್ದರೆ ಎರಡು ಕಂಪ್ಯೂಟರ್ ಕೊಟ್ಟು ಬಿಡಿ ಪೂರ್ತಿಯಾಗಿ ಆರಾಮಾಗಿರಬಹುದು.
2
ಬಂತಾ: ನಿನಗೆ ಯಾವ ತರಹದ ಹೆಂಡತಿ ಬೇಕು?
ಸಂತಾ: ಚಂದ್ರನ ತರಹ.
ಬಂತಾ: ಅಂದರೆ?
ಸಂತಾ: ರಾತ್ರಿ ಕಾಣಿಸಿಕೊಳ್ಳಬೇಕು, ಬೆಳಗ್ಗೆ ಮಾತ್ರ ಕಣ್ಣಿಗೆ ಬೀಳಬಾರದು.
3
ಎಂದೂ ಇಲ್ಲದ ಗಂಡ ಒಂದು ದಿನ ಮನೆಗೆ ಬೇಗ ಬಂದದ್ದಕ್ಕೆ ಹೆಂಡತಿಗೆ ಆಶ್ಚರ್ಯವಾಗಿ ಕೇಳಿದಳು.
ಮನೆಗೆ ಏಕೆ ಇಷ್ಟು ಬೇಗ ಬಂದಿರಿ?
ಅಂತಾ.
ಅದಕ್ಕವನು ಹೇಳಿದ- ಗೋ ಟು ಹೆಲ್ ಎಂದು ಬಾಸ್ ಹೇಳಿದ್ದಕ್ಕೆ ಬಂದೆ.
4
ಟೀಚರ್: ಸುರೇಶ ಕೊಡಲಿಯಿಂದ ಬಾಳೆಮರ ಕಡಿದುಹಾಕಿ, ಅಪ್ಪನ ಹತ್ರ ಒಪ್ಪಿಕೊಂಡ. ಅಪ್ಪ ಅವನನ್ನ ಕ್ಷಮಿಸಿದ. ಏಕೆ?
ಗುಂಡ: ಅವನ ಕೈಲಿ ಕೊಡಲಿ ಇತ್ತು ಅದಕ್ಕೆ. ಅಪ್ಪ ಕ್ಷಮಿಸದೆ ಹೋದರೆ ಬಾಳೆಮರದಂತೆ ಅವನ ರುಂಡವೂ ಹಾರುತ್ತಿತ್ತು.