ಭಾರತೀಯ: ನಂಗೆ ನಾಲ್ಕು ತಂಗಿಯರು ಮತ್ತು ಮೂರು ಅಣ್ಣಂದಿರಿದ್ದಾರೆ... ನಿಂಗೆ?
ಅಮೆರಿಕನ್: ನನಗೆ ಅಕ್ಕ-ತಂಗಿ, ಅಣ್ಣ-ತಮ್ಮಂದಿರಿಲ್ಲ. ಆದರೆ ಮೊದಲ ತಂದೆಯಿಂದ ಐವರು ತಾಯಿಯರು ಹಾಗೂ ಮೊದಲ ತಾಯಿಯಿಂದ ನಾಲ್ವರು ತಂದೆಯರಿದ್ದಾರೆ..!
*****
ಬ್ಲಡ್ ಟೆಸ್ಟ್..
ಆತ: ಯಾಕೋ ನೀನು ರಕ್ತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದೀಯಾ?
ಗುಂಡ: ನಾಳೆ ನಂಗೆ ಬ್ಲಡ್ ಟೆಸ್ಟ್ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ಒಳ್ಳೇ ಮಾರ್ಕ್ಸ್ ತಗೋಬೇಕು..!
*****
ಸೇಡಿನ ಪರಿ
ಬಂತಾ: ನನ್ನ ಸಾವಿನ ನಂತರ ನೀನು ಸಂತಾನನ್ನೇ ಮದುವೆಯಾಗಬೇಕು.
ಹೆಂಡತಿ: ಯಾಕೆ.. ಅವರು ನಿಮ್ಮ ವೈರಿಯಲ್ಲವೇ?
ಬಂತಾ: ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಉಳಿದಿರುವ ದಾರಿ ಇದೊಂದೇ..!
*******
ಪ್ರತ್ಯಕ್ಷ ಸಾಕ್ಷಿ
ಸಂತಾ: ಈ ಕಾಲೇಜು ಉತ್ತಮವಾಗಿದೆಯೇ?
ಸೆಕ್ಯುರಿಟಿ: ನಿಜಕ್ಕೂ ಸಾರ್... ನಾನು ಇಲ್ಲೇ ಎಂಬಿಎ ಮಾಡಿದ್ದು.. ತಕ್ಷಣವೇ ಕೆಲ್ಸಾನೂ ಸಿಕ್ತು...!
***
ಇದಪ್ಪಾ ವರಸೆ..
ಸಂತಾ: ನಾನು ಐದು ದಿನಗಳ ಕಾಲ ಮನೆಯಲ್ಲಿರೋಲ್ಲ. ದೂರ ಪ್ರವಾಸ ಹೋಗಲಿದ್ದೇನೆ.
ಹೆಂಡತಿ: ಆಯ್ತು. ಆದ್ರೆ ನನಗೆ ಸರ್ಪ್ರೈಸ್ ಕೊಡಬೇಕೆಂದು ಮುಂಚಿತವಾಗಿ ಬರಬೇಡಿ. ಹಾಗೆಲ್ಲಾದರೂ ಬಂದಿದ್ದೇ ಆದರೆ ನಿಮಗೆ ಸರ್ಪ್ರೈಸ್ ಕಾದಿರುತ್ತದೆ..!