ಟೀಚರ್: ಭೂಮಿಗೂ ಚಂದ್ರನಿಗೂ ಇರುವ ಸಂಬಂಧ ಏನು?
ಗುಂಡ: ಅಣ್ಣ-ತಂಗಿ ಸಂಬಂಧ ಸಾರ್..
ಟೀಚರ್: ಹೇಗೆ...?
ಗುಂಡ: ಏಕೆಂದರೆ ಭೂಮೀನ ನಾವು ತಾಯಿ ಅಂತೀವಿ.. ಚಂದ್ರನ್ನ ಮಾಮಾ ಅಂತೀವಿ.. ಅದಕ್ಕೆ ಸಾರ್..!
****
ಈಗ ಟೈಟಾಗಿದ್ದಿ..
ನಾರದ ಮಹರ್ಷಿಗಳು ವೇಷಧಾರಿಯಾಗಿ ಭೂಲೋಕಕ್ಕೆ ಬಂದು ಬಾರ್‌ನಲ್ಲಿ ಬೀರು ಕುಡಿಯುತ್ತಿದ್ದರು.
ವೈಟರ್: ಏನ್ ಗುರೂ.. ಹತ್ತು ಬಾಟಲ್ ಬೀರು ಕುಡಿದರೂ ಕಿಕ್ ಹೊಡೀಲಿಲ್ವೇ...?
ನಾರದ: ನಾನು ದೇವರು ಕಣಪ್ಪಾ..
ವೈಟರ್: ಈಗ ಫುಲ್ ಟೈಟಾಗಿದ್ದೀಯಾ ಮಗನೇ...!
***
ಉಸ್ಸಪ್ಪಾ..
ಪ್ರಶ್ನೆ: ಸಾನಿಯಾ ಮಿರ್ಜಾ ಕನ್ನಡ ಚಿತ್ರದಲ್ಲಿ ನಾಯಕಿಯಾದರೆ ನಾಯಕ ಯಾರು?
ಉತ್ತರ: ವೆರಿ ಸಿಂಪಲ್... ಟೆನ್ನಿಸ್ ಕೃಷ್ಣ....!
***
ವ್ಯತ್ಯಾಸವಿದು..
ಪ್ರಶ್ನೆ: ಕವಿತೆಗೂ ಪ್ರಬಂಧಕ್ಕೂ ಇರುವ ವ್ಯತ್ಯಾಸವೇನು?
ಉತ್ತರ: ಗೆಳತಿಯ ಬಗ್ಗೆ ಬರೆದರೆ ಕವಿತೆ... ಹೆಂಡತಿ ಬಗ್ಗೆ ಬರೆದರೆ ಅದು ಪ್ರಬಂಧ..!
***
ಚಿಕನ್ ಐಟಮ್ಸ್
ರಾಮು: ತಿನ್ನೋದಿಕ್ಕೆ ಏನೇನಿದೆ..?
ವೈಟರ್: ಚಿಕನ್ ಬಿರಿಯಾನಿ, ಚಿಕನ್ ಮಸಾಲ, ಚಿಕನ್ ತಂದೂರಿ, ಚಿಕನ್ ಸುಕ್ಕಾ...
ರಾಮು: ಬೇರೇನಾದ್ರೂ ಹೊಸತು ಇದೆಯಾ..?
ವೈಟರ್ : ಚಿಕನ್ ಗುನ್ಯಾ ಇದೆ ಬೇಕಾ..!