Select Your Language

Notifications

webdunia
webdunia
webdunia
webdunia

ಇಂಥವ್ರೂ ಇದ್ದಾರಾ?

ಇಂಥವ್ರೂ ಇದ್ದಾರಾ?
ಚೆನ್ನೈ , ಗುರುವಾರ, 20 ನವೆಂಬರ್ 2014 (14:28 IST)
ಒಬ್ಬ: ರೈಲಿನಲ್ಲಿ ರಾತ್ರಿ ಪೂರಾ ನಿದ್ದೆನೇ ಬರ್ಲಿಲ್ಲ?
 
ಮತ್ತೊಬ್ಬ: ಏನು?
 
ಆತ: ನನಗೆ ಮೇಲಿನ ಬರ್ತ್ ಸಿಕ್ಕಿತ್ತು.
 
ಮತ್ತೊಬ್ಬ: ಬೇರೆಯವರ ಜತೆ ಬದಲಾಯಿಸಿಕೊಳ್ಳಬಹುದಿತ್ತಲ್ಲ?
 
ಆತ: ಅದಲು ಬದಲು ಮಾಡಿಕೊಳ್ಳಲು ಅಲ್ಲಿ ಬೇರೆ ಯಾರೂ ಇರಲಿಲ್ಲ..!?
 
*****
ಒದ್ದೆಯಾಗ್ತೇನೆ..
 
ಆತ: ನಾನು ಸ್ನಾನ ಮಾಡುವಾಗ ಯಾವಾಗಲೂ ಒದ್ದೆಯಾಗ್ತೇನೆ.
 
ಡಾಕ್ಟರ್: ಮುಂದಿನ ಬಾರಿ ನೀರಿನ ಟ್ಯಾಪ್ ಆಫ್ ಮಾಡಿದ ನಂತರ ಸ್ನಾನಕ್ಕೆ ಇಳಿಯಿರಿ..!
 
***
 
ಅಬ್ಬಬ್ಬಾ..
 
ಆತ ಸ್ಮಶಾನದಲ್ಲಿ ಕೂತು ಬಿಕ್ಕಳಿಸುತ್ತಿದ್ದ. ಜೊತೆಗೆ "ನಿನಗ್ಯಾಕೆ ಇಂತಹ ಸಾವು ಬಂತು? ನೀನ್ಯಾಕೆ 
 
ಸತ್ತೆ... ನಿನ್ನಿಂದಾಗಿ ನನ್ನ ಜೀವನವೇ ಹಾಳಾಗಿ ಹೋಯ್ತು..." ಎಂದು ಬೇರೆ ರೋಧಿಸುತ್ತಿದ್ದ.
 
ದಾರಿ ಹೋಕ: ಇಷ್ಟೊಂದು ಅಳ್ತಿದ್ದೀರಲ್ಲಾ.. ಸತ್ತವರು ಯಾರು? ನಿಮ್ಮ ಮಗುವೇ, ಪೋಷಕರೇ, 
 
ಹೆಂಡತಿಯೇ ಅಥವಾ ಗರ್ಲ್ ಫ್ರೆಂಡಾ?
 
ಆತ: ನನ್ನ ಹೆಂಡತಿಯ ಮೊದಲ ಗಂಡ..!
 
***
ಆಕ್ಸಿಡೆಂಟ್
 
ಹೆಂಡತಿ: ಯಾಕ್ರೀ.. ಕಾರನ್ನು ಅಷ್ಟೊಂದು ಸ್ಪೀಡಾಗಿ ಓಡಿಸ್ತಿದ್ದೀರಾ?
 
ಗಂಡ: ಬ್ರೇಕ್ ಫೈಲಾಗಿದೆ. ಕಾರು ಆಕ್ಸಿಂಡೆಂಟ್ ಆಗುವ ಮೊದಲು ನಾವು ಮನೆ ತಲುಪಬೇಕು..!
 
 
****
ಗಾಂಧೀಜಿ
 
ಟೀಚರ್: 1869ರಲ್ಲಿ ಏನಾಯ್ತು?
 
ವಿದ್ಯಾರ್ಥಿ: ಗಾಂಧೀಜಿ ಹುಟ್ಟಿದರು.
 
ಟೀಚರ್: 1873ರಲ್ಲಿ ಏನಾಯ್ತು?
 
ವಿದ್ಯಾರ್ಥಿ: ಗಾಂಧೀಜಿಗೆ ನಾಲ್ಕು ವರ್ಷ ತುಂಬಿತ

Share this Story:

Follow Webdunia kannada