ಆತ: ಸುದೀರ್ಘ ಜೀವನಕ್ಕೆ ಏನಾದರೂ ಮಾರ್ಗಗಳಿವೆಯೇ?
ಡಾಕ್ಟರ್: ಮದುವೆಯಾಗಿ..
ಆತ: ಇದರಿಂದ ದೀರ್ಘ ಬಾಳಿಕೆ ನಮಗಾಗಬಹುದೇ?
ಡಾಕ್ಟರ್: ಇಲ್ಲ.. ಆದರೆ ಅಂತಹ ಯೋಚನೆ ನಿಮಗೆ ಮತ್ತೆಂದೂ ಬರುವುದಿಲ್ಲ..!
********
ಹೆಂಡತಿಯರೆಂದರೆ...
ಪ್ರಶ್ನೆ: ಮಾಫಿಯಾಗಿಂತಲೂ ಹೆಂಡತಿಯರೆಂದರೆ ಯಾಕೆ ಡೇಂಜರಸ್?
ಉತ್ತರ: ಮಾಫಿಯಾ ಒಂದೋ ನಿಮ್ಮ ಹಣ ಅಥವಾ ಜೀವವನ್ನು ಕೇಳುತ್ತಾರೆ. ಆದರೆ ಹೆಂಡತಿಯರಿಗೆ ಅದೆರಡೂ ಬೇಕು..!
*********
ಮಾಮೂಲಿ ವಿಚಾರ..
ಪ್ರಶ್ನೆ: ಹೆಂಡತಿಯೊಂದಿಗೆ ವಾಗ್ವಾದ ಮುಗಿದ ನಂತರ ಗಂಡ ಏನು ಮಾಡುತ್ತಾನೆ?
ಉತ್ತರ: ಕ್ಷಮೆ ಕೇಳ್ತಾನೆ..!
********
ಕುಟುಂಬದ ದಿಕ್ಕು
ಪುರುಷನೆಂದರೆ ಕುಟುಂಬದ ತಲೆಯಿದ್ದಂತೆ. ಹೆಂಡತಿ ಕತ್ತು. ತಲೆಯನ್ನು ಯಾವ ಕಡೆ ತಿರುಗಿಸುವುದಿದ್ದರೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಕತ್ತು..!
*******
ಅಬ್ಬಬ್ಬಾ...
ಗೆಳೆಯ: ಹೇಗಿದೆ ನಿನ್ನ ಲೈಂಗಿಕ ಜೀವನ?
ಆತ: ಎಂದಿನಂತೆ ಮಾಮೂಲಿ... ಸೋಮವಾರದಿಂದ ಶುಕ್ರವಾರದವರೆಗೆ..
ಗೆಳೆಯ: ವಾರಾಂತ್ಯಗಳಲ್ಲಿ ಏನಾಗುತ್ತೆ?
ಆತ: ವಾರಂತ್ಯಗಳಲ್ಲೋ..? ಆಗ ನಾನು ಮನೆಯಲ್ಲಿರುತ್ತೇನೆ. ಹೆಂಡತಿಯೊಂದಿಗೆ ವಿಶ್ರಾಂತಿ ಪಡೆಯುತ್ತೇನೆ..!