Select Your Language

Notifications

webdunia
webdunia
webdunia
webdunia

ಸ್ನಾನ ದ್ವೇಷಿಗೆ...

ಸ್ನಾನ ದ್ವೇಷಿಗೆ...
ಚೆನ್ನೈ , ಗುರುವಾರ, 20 ನವೆಂಬರ್ 2014 (13:18 IST)
ಮರೀ... ಏನೂ ತಿಳ್ಕೋಬೇಡ... ಸಖತ್ತಾಗಿ ಮುಂಗಾರು ಮಳೆಯಾಗಿದೆ ಗೊತ್ತಾ ? ನಮ್ಮೂರ ಕೆರೆ ತುಂಬಿ ಕೋಡಿ ಬೀಳ್ತಿದೆ. 
 
ಗೊತ್ತು ನೀನು ಹಠವಾದಿ. ಹಿಡಿದ ಕೆಲಸ ಮುಗಿಯುವವರೆಗೆ ಬಿಡೋನಲ್ಲ. ಅದು ನಿನ್ನ ಜನ್ಮಜಾತ ಸ್ವಭಾವ. ಹೆಂಗೆ ಅಂದರೆ ನಮ್ಮ ಎಮ್ಮಿಗೆ ಕೊಳಕು ನೀರು ನೋಡಿ, ಓಡಿ ಹೋಗಿ ಅದರಲ್ಲಿ ಹೊರಳಾಡುವ ಹುಕಿ ಯಾವ ರೀತಿ ಬರುತ್ತದೋ... ಅದೇ ರೀತಿ ನಿನಗೂ. ಬಚ್ಚಲು ಮನೆ ಸ್ನಾನ ಶಬ್ದ ಕೇಳಿದ ಕೂಡಲೇ ಓಡ್ತಿಯಾ... ಎಲ್ಲಿಗೆ ಅಂತ ಕೇಳಲ್ವಾ. ? ಮನೆಯಿಂದ... ಸ್ನಾನ ದ್ವೇಷಿ!
 
ಪುಟ್ಟಾ ಈಗಲೂ ಹೇಳ್ತೇನೆ ಕೇಳು... ಕೆರೇಲಿ ಸಖತ್ ನಮ್ಮ ಕೋಣನ ತರ ತಲೆ ಮುಳುಗು ಹಾಕಿ ಒಂದಿನಾ ಆದ್ರೂ ಕಳೆಯೋ.. ಯಾರೇ  ಹೋರಾಡಲಿ.. ಯಾರೇ ಕೂಗಾಡಲಿ.. ಅಂತ ಸ್ನಾನ ಬಿಡಬೇಡ. ಇವತ್ತು ಫ್ರೆಂಡ್‌ಶಿಪ್ ಡೇ. ನಿನ್ನ ಜೊತೆ ನಾನಿರಬೇಕು ಅಂದರೆ ನಿನ್ನ ಭೀಷ್ಮ ಪ್ರತಿಜ್ಞೆ ಮುರಿದು..  ಮುಂಗಾರು ಮಳೆ ಹಾಡು ಹಾಡ್ತಾ ಒಂದೇ ಒಂದು ಸಾರಿ ಕೆರೇಲಿ ಮುಳುಗು ಹಾಕೋ. ನಿನ್ನ ಸ್ನಾನ ನಾ ನೋಡಬೇಕು... 
 

Share this Story:

Follow Webdunia kannada