Publish Date: Thu, 20 Nov 2014 (14:39 IST)
Updated Date: Thu, 20 Nov 2014 (14:41 IST)
ಸಂಟಾ ಹಾಗೂ ಫಂಟಾ ಜಗಳ ಕಾದಿದ್ದು ಹೇಗೊ ಮಾಸ್ತರಿಗೆ ತಿಳಿಯಿತು.
ಸಂಟಾನನ್ನು ಕರೆದ ಅವರು-"ಏನೋ ಫಂಟಾಗೆ ಛತ್ರಿಯಿಂದ ಹೊಡೆದೆಯಂತೆ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಹೇಗೆ?" ಎಂದರು.
"ಹೌದು ಸರ್, ಹೀಗಾಗುತ್ತೆ ಅಂತ ಮೊದಲೆ ಗೊತ್ತಿದ್ದರೆ ಖಂಡಿತಾ ನಾ ಹೊಡಿತಾ ಇರಲಿಲ್ಲ." ಎಂದ ಸಪ್ಪೆ ಮುಖದಿಂದ.
"ಈಗ ಅಂಥದ್ದೆನಾಗಿಲ್ಲ ಬಿಡು ಅವನಿಗೆ." ಎಂದರು ಗುರುಗಳು.
"ನಾನು ನನ್ನ ಛತ್ರಿ ವಿಷ್ಯ ಹೇಳ್ತಿದ್ದೀನಿ ಸರ್, ಅದಕ್ಕೆ ಎಷ್ಟು ನೋವಾಯಿತೊ ಎನೊ...." ಕಳವಳ ವ್ಯಕ್ತಪಡಿಸಿದ ಸಂಟಾ.