Select Your Language

Notifications

webdunia
webdunia
webdunia
webdunia

ಹುಷಾರು..!

ಹಾಸ್ಯ
ಆತನ ಹೆಂಡತಿ ತೀರಿಕೊಂಡಿದ್ದಳು. ಶವಯಾತ್ರೆ ಇಕ್ಕಟ್ಟಾದ ಸಂಧಿಯಲ್ಲಿ ಸಾಗುತ್ತಿರುವಾಗ ಶವಪೆಟ್ಟಿಗೆಗೆ ಗೋಡೆ ತಾಗಿ ಮುಚ್ಚಳ ತೆರೆದುಕೊಂಡಿತು. ಪಕ್ಕನೆದ್ದು ಬಿಟ್ಟಳು ಹೆಂಡತಿ... ಅವಳು ಸತ್ತಿರಲಿಲ್ಲ...!
 
ಕೆಲ ದಿನಗಳ ನಂತರ ಆಕೆ ಮತ್ತೊಮ್ಮೆ ಸತ್ತಳು. ಶವಯಾತ್ರೆ ಸಾಗುತ್ತಿರುವಾಗ ಈ ಬಾರಿ ಗಂಡ ಹೇಳಿದ,  'ಹುಷಾರು, ಗೋಡೆಗೆ ತಾಗಿಸಬೇಡಿ'..!
 
**********
 
ನೀರು
 
ಹೆಂಡತಿ (ಫೋನ್‌ನಲ್ಲಿ): ಕಾರಿನ ಎಂಜಿನ್‌ಗೆ ನೀರು ಸೇರ್ಕೊಂಡಿದೆ.
 
ಗಂಡ: ಕಾರು ಎಲ್ಲಿದೆ?
 
ಹೆಂಡತಿ: ನೀರಿನೊಳಗೆ ಮುಳುಗಿದೆ..!
 
 
****
 
ಮದುವೆ
 
ಮಗ: ಅಪ್ಪಾ, ಆಫ್ರಿಕಾದಲ್ಲಿ ಮದುವೆ ಆಗುವವರೆಗೆ ಹೆಂಡತಿ ಯಾರು, ಎಂಥವಳು ಎಂದು ಗೊತ್ತೇ ಇರುವುದಿಲ್ಲವಂತೆ, ಹೌದೆ?
 
ಅಪ್ಪ: ಎಲ್ಲಾ ಕಡೇನೂ ಹಾಗೇ ಮಗೂ...!
 
 
*****
ಬೇಕಾಗಿದ್ದಾಳೆ..!
 
'ಹೆಂಡತಿ ಬೇಕಾಗಿದ್ದಾಳೆ' ಎಂದು ಒಬ್ಬಾತ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟ. ಮಾರನೆಯ ದಿನ ಸಾವಿರಾರು ಕಾಗದಗಳು ಬಂದಿದ್ದವು. ಎಲ್ಲದರಲ್ಲೂ ಅದೇ ಡೈಲಾಗ್.. - 'ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬಹುದು'...!
 
 
*********
 
ಲಕ್ಷಾಧೀಶ್ವರ
 
ಆಕೆ: ನನ್ನನ್ನು ಮದುವೆಯಾದ ನಂತರ ಗಂಡ ಲಕ್ಷಾಧೀಶನಾದ.
 
ಸ್ನೇಹಿತೆ: ಹೌದೇ, ಮೊದಲು ಏನಾಗಿದ್ದ?
 
ಆಕೆ: ಕೋಟ್ಯಧೀಶ..!

Share this Story:

Follow Webdunia kannada