ಪರೀಕ್ಷೆ ಬರೆದ ಮೂವರು ಗೆಳೆಯರು ಮಾತಿಗಿಳಿದರು.
ಒಬ್ಬ: ನಂಗೆ ಪರೀಕ್ಷೆ ಹಾಲ್‌ನಲ್ಲಿ ಏನೂ ನೆನಪು ಬರ್ಲಿಲ್ಲ. ಹಾಗಾಗಿ ಖಾಲಿ ಉತ್ತರ ಪತ್ರಿಕೆಯನ್ನು ವಾಪಸ್ ಕೊಟ್ಟು ಬಂದೆ.
ಮತ್ತೊಬ್ಬ: ನಾನು ಕೂಡ
ಮಗದೊಬ್ಬ: ಛೆ.. ಹಾಗೆ ಮಾಡಬಾರದಿತ್ತು. ನಾವು ಮೂವರೂ ಕಾಪಿ ಮಾಡಿದ್ದೇವೆ ಅಂತ ಟೀಚರ್ ಅಂದುಕೊಳ್ತಾರೆ..!
********
ಬ್ಯಾಂಕ್ ಕಿತಾಪತಿ
ರಾಮುವಿಗೆ ತನ್ನನ್ನು ಯಾರೋ ಕೊಲೆ ಮಾಡುವ ಕನಸು ಬಿತ್ತು. ಮರುದಿನ ಹೋದವನೇ ತನ್ನ ಬ್ಯಾಂಕ್ ಅಕೌಂಟನ್ನು ಕ್ಲೋಸ್ ಮಾಡಿ ಬಂದ.
ಯಾಕೆ ಗೊತ್ತಾ?
- ಆತ ಅಕೌಂಟ್ ಹೊಂದಿದ್ದ ಬ್ಯಾಂಕ್‌ನ ಸ್ಲೋಗನ್ ಹೀಗಿತ್ತು -- ನಾವು ನಿಮ್ಮ ಕನಸನ್ನು ಸಾಕಾರಗೊಳಿಸುತ್ತೇವೆ..!
*****
ಗೂಬೆ ನೋಡಿದ್ದೀಯಾ?
ಅಪ್ಪ: ನೀನ್ಯಾವತ್ತಾದ್ರೂ ಗೂಬೆ ನೋಡಿದ್ದೀಯಾ?
ಮಗ ಕೆಳಗೆ ನೋಡುತ್ತಾ: ಇಲ್ಲ..
ಅಪ್ಪ: ಕೆಳಗೆ ನೋಡ್ಬೇಡ.. ನನ್ನ ಮುಖ ನೋಡು..!
*******
ಮದುವೆ-ಡೈವೋರ್ಸ್
ಒಬ್ಬ: ಅಡುಗೆ ಮಾಡಿ, ಮನೆ ಕ್ಲೀನ್ ಮಾಡಿ, ಬಟ್ಟೆ ಒಗೆದು ಸಾಕಾಗಿ ಹೋಯ್ತು.. ಅದಕ್ಕೆ ನಾನೀಗ ಮದುವೆಯಾಗಿದ್ದೇನೆ.
ಮತ್ತೊಬ್ಬ: ಅದೇ ಕಾರಣಕ್ಕೆ ನಾನು ಡೈವೋರ್ಸ್ ಪಡೆದಿದ್ದೇನೆ...!
******
ಅಸ್ತಿಪಂಜರ
ಸಂದರ್ಶನಕಾರ: ಅಸ್ತಿಪಂಜರ ಎಂದರೇನು?
ಉದ್ಯೋಗಾರ್ಥಿ: ವ್ಯಕ್ತಿಯೊಬ್ಬ ಡಯಟ್ ಆರಂಭಿಸಿ ನಿಲ್ಲಿಸಲು ಮರೆತು ಹೋದಾಗ ಒದಗುವ ಸ್ಥಿತಿಯೇ ಅಸ್ತಿಪಂಜರ...!