ಹರಾಜು ನಡೆಯುತ್ತಿದ್ದ ಸ್ಥಳದಲ್ಲಿ ಒಬ್ಬಾತ ತನ್ನ ಐದು ನೂರು ರೂಪಾಯಿಗಳಿರುವ ಪರ್ಸನ್ನು ಕಳೆದುಕೊಂಡ.
ಆತ ವೇದಿಕೆಯ ಮೇಲೆರಿ ವಿಷಯ ತಿಳಿಸಿ ನನ್ನ ಪರ್ಸ್ ಹುಡುಕಿ ತಂದು ಕೊಟ್ಟವರಿಗೆ 200 ರೂಪಾಯಿ ಬಹುಮಾನ ಕೊಡುತ್ತೇನೆ ಎಂದ.
ತಕ್ಷಣವೆ ಜನರ ಮಧ್ಯದಿಂದ ಇನ್ನೊಂದು ಧ್ವನಿ ಹೇಳಿತು ನನಗೆ ತಂದು ಕೊಟ್ಟವರಿಗೆ 400 ರೂಪಾಯಿ ನೀಡುತ್ತೇನೆ.