ಲಾಟರಿ ಟಿಕೇಟ್ ಕೊಳ್ಳು ಅಭ್ಯಾಸವನ್ನು ಹೊಂದಿದ್ದ ಸಂತಾನಿಗೆ ಒಮ್ಮೆ 20 ಲಕ್ಷ ರೂಪಾಯಿ ಲಾಟರಿ ಹೊಡೆಯಿತು. ಸಂತಾನಿಗೆ ಟಿಕೆಟ್ ಮಾರಿದ್ದ ಡೀಲರು ತೆರಿಗೆಯನ್ನೆಲ್ಲಾ ಕಳೆದು ಹನ್ನೊಂದು ಲಕ್ಷವನ್ನು ನೀಡಿದ.
ತನಗೆ ಪೂರ್ತಿ 20 ಲಕ್ಷ ನೀಡಲಿಲ್ಲವೆಂದು ಸಂತಾನಿಗೋ ಸಿಟ್ಟೋ ಸಿಟ್ಟು. ಕುಪಿತಗೊಂಡ ಸಂತಾ, ನನಗೆ ಮರ್ಯಾದೆಯಲ್ಲಿ 20 ಲಕ್ಷ ಕೊಡಿ ಅದಾಗದಿದ್ದಲ್ಲಿ ನನ್ನ ಟಿಕೆಟ್ಟಿನ 20 ರೂಪಾಯಿಯನ್ನು ಹಿಂದಕ್ಕೆ ಕೊಟ್ಟುಬಿಡಿ ಎಂದ.
ಬಂತಾನಿಗೆ ಯಾವುದಾದರೂ ಹುಡುಗಿಯನ್ನು ಪ್ರೀತಿಸಬೇಕು ಅಂತ ತುಂಬಾ ಆಸೆ. ಕೊನೆಗೂ ಒಂದು ಹುಡುಗಿಗೆ ಪ್ರಪೋಸ್ ಮಾಡಿದ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದೇನೆ ನನ್ನನ್ನು ಮದುವೆಯಾಗ್ತೀಯ ಅಂತ ಕೇಳಿದ.
ಆ ಹುಡುಗಿಯು ಬೇಸರದಿಂದ, ನಾನು ನಿನ್ನ ಮದುವೆಯಾಗಬಹುದಿತ್ತು ಆದರೆ ಏನು ಮಾಡಲಿ ನಾನು ನಿನ್ನಕ್ಕಿಂತ ಒಂದು ವರ್ಷ ದೊಡ್ಡವಳು ಎಂದಳು
ಸ್ವಲ್ಪವೂ ಬೇಸರಗೊಳ್ಳದ ಬಂತಾ ಹೇಳಿದ ಪರವಾಗಿಲ್ಲ ಬಿಡು ಡಿಯರ್, ನಾನು ನಿನ್ನನ್ನು ಮುಂದಿನ ವರ್ಷ ಮದುವೆಯಾಗುತ್ತೇನೆ.