ಡಾಕ್ಟರ್: ಏನ್ರೀ, ಎರಡೂ ಕಿವಿಗಳನ್ನು ಸುಟ್ಕೊಂಡಿದ್ದಿರಾ?
ಸಂತಾ: ಬೆಳಗ್ಗೆ ಬಟ್ಟೆಗಳಿಗೆ ಇಸ್ತ್ರಿ ಮಾಡ್ತಾ ಇದ್ದೆ. ಯಾರೋ ಒಬ್ಬ ಮೂರ್ಖ ಪೋನ್ ಮಾಡಿದ. ಇವೆಲ್ಲದಕ್ಕೂ ಅವನೇ ಕಾರಣ.
ಡಾಕ್ಟರ್: ನೀವು ಏನು ಹೇಳ್ತಿದ್ದೀರಾ ಎಂದೇ ನಂಗೆ ಅರ್ಥವಾಗ್ತಿಲ್ಲ. ಬಿಡಿಸಿ ಹೇಳಿ.
ಸಂತಾ: ಅಲ್ಲೇ ಡಾಕ್ಟ್ರೇ ಎಡವಟ್ಟಾಗಿದ್ದು. ಫೋನ್ ರಿಂಗಾಗುತ್ತಿದ್ದುದನ್ನು ಕೇಳಿ ಗಡಿಬಿಡಿಯಿಂದ ಫೋನ್ ಕಿವಿಗೆ ಇಡುವ ಬದಲು ಇಸ್ತ್ರಿಪೆಟ್ಟಿಗೆಯನ್ನೇ ಕಿವಿಗೆ ಇಟ್ಟೆ.
ಡಾಕ್ಟರ್: ಓಹೋ ಹೀಗಾ ಕಥೆ. ಹೋಗ್ಲಿ ಬಿಡಿ. ಇನ್ನೊಂದು ಕಿವಿ ಯಾಕೆ ಸುಟ್ಟೋಯ್ತು?
ಸಂತಾ: ಆ ಮೂರ್ಖ ಮತ್ತೆ ಫೋನ್ ಮಾಡ್ದ ಸಾರ್..!