ಗುಂಡ ಓಡೋಡಿ ಬಂದವನೇ ಇವತ್ತು ಬಸ್ಸಿನಲ್ಲಿ ಬರುವಾಗ ಪಿಕ್ ಪಾಕೆಟ್ ಆಗಿಹೋಯ್ತು ಕಣೋ ಅಂದ. ಆದರೆ ಆತ ತುಂಬಾ ಸಂತೋಷದಲ್ಲಿದ್ದ.
ಅವನ ಗೆಳೆಯನಿಗೆ ಆಶ್ಚರ್ಯವೋ ಆಶ್ಚರ್ಯ. ಅಲ್ಲಾ ಮಾರಾಯ, ಪಿಕ್ ಪಾಕೆಟ್ ಆಗಿದೆ ಅಂತ್ಯಲ್ಲಾ ಮತ್ಯಾಕೆ ಇಷ್ಟೊಂದು ಖುಷಿಯಾಗಿದ್ದಿ ಅಂತ ಆತ ಕೇಳಿದಾಗ,
ಕಳ್ಳರು ನನ್ನ ಜೇಬು ಕತ್ತರಿಸಲಿಲ್ವಲ್ಲಾ ... ಪರ್ಸ್ ಮಾತ್ರ ಎತ್ತಿಕೊಂಡು ಹೋಗಿದ್ದಾರೆ ಅಂತ ಗುಂಡ ತುಂಬಾ ಖುಷಿಯಿಂದ ಹೇಳಿದ.