ಸಂತಾ ಕುಟುಂಬ ಸಮೇತ ಅಮೆರಿಕ ಪ್ರವಾಸ ಹೋಗಿದ್ದ. ಅಕಸ್ಮಾತ್ ಅಮೆರಿಕಾದಲ್ಲೇ ಆತನ ಅತ್ತೆ ತೀರಿ ಹೋದರು.
ಇಲ್ಲೇ ಅಂತ್ಯಸಂಸ್ಕಾರ ನಡೆಸೋದಾದ್ರೆ 1500 ಡಾಲರ್, ಭಾರತಕ್ಕೆ ಕೊಂಡೊಯ್ಯುವುದಾದರೆ 10,000 ಡಾಲರ್ ನೀಡಬೇಕು ಎಂದು ಅಮೆರಿಕ ಅಧಿಕಾರಿಗಳು ಸೂಚಿಸಿದರು.
ಎಷ್ಟು ಖರ್ಚಾದರೂ ಪರವಾಗಿಲ್ಲ. ಅತ್ತೆಯ ಹೆಣವನ್ನು ಭಾರತದಲ್ಲೇ ಹೂಳುವುದಾಗಿ ಸಂತಾ ಪಟ್ಟುಹಿಡಿದ.
ಆತನ ಹೆಂಡತಿ ಕಾರಣವೇನೆಂದು ಪ್ರಶ್ನಿಸಿದಳು.
'ಅಮೆರಿಕದಲ್ಲಿ ಕಳೆದ ವರ್ಷ ಹೂತಿದ್ದ ಹೆಣವೊಂದು ಎರಡು ದಿನಗಳ ನಂತರ ಜೀವಂತವಾಗಿ ಎದ್ದು ಬಂದಿದೆಯಂತೆ. ನಾನು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ'...!