ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಐಪಿಎಲ್‌ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ತಂಡ. ಆದರೆ ಹೊಸ ಸೀಸೆಯಲ್ಲಿ ಹಳೆಯ ಮದ್ಯ ಎನ್ನುವಂತೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಅಶ್ವಿನ್, ರಹಾನೆ, ಪ್ಲೆಸಿಸ್, ಮಿಚೆಲ್ ಮಾರ್ಶ್ ಮುಂತಾದ ಆಟಗಾರರ ಬಳಗವಿದ್ದರೂ ಪಾಯಿಂಟ್ ಪಟ್ಟಿಯಲ್ಲಿ ಕಡೆಯ ಸ್ಥಾನಕ್ಕೆ ಕುಸಿದು ಪ್ಲೇ ಆಫ್ ಪ್ರವೇಶದ ಅವಕಾಶದಿಂದ ವಂಚಿತವಾಗಿದೆ.
ಒಳ್ಳೆಯ ಆಟಗಾರರಿದ್ದರೂ ರೈಸಿಂಗ್ ಪುಣೆ ನೀರಸ ಪ್ರದರ್ಶನ ನೀಡಿರುವುದನ್ನು ನೋಡಿದರೆ ಧೋನಿಯ ನಾಯಕತ್ವ ಸೊರಗುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ.
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ( ಪಾಯಿಂಟ್ 6, ನೆಟ್ ರನ್ ರೇಟ್-0.078)
ಉಳಿದಿರುವ ಪಂದ್ಯಗಳು
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ, ವಿಜಾಗ್, 17 ಮೇ 2015
ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ, ವಿಜಾಗ್, 21 ಮೇ 2015
12 ಪಂದ್ಯಗಳಿಂದ ಕೇವಲ 6 ಪಾಯಿಂಟ್‌ಗಳೊಂದಿಗೆ, ಸೂಪರ್ ಜೈಂಟ್ಸ್ ಪಂದ್ಯಾವಳಿಯಿಂದ ನಿರ್ಗಮಿಸಿದೆ. ಎರಡೂ ಪಂದ್ಯಗಳನ್ನು ಗೆದ್ದರೆ, ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಜಿಗಿಯಬಹುದು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.