Webdunia - Bharat's app for daily news and videos

Install App

ತಪ್ಪನ್ನು ಸರಿಪಡಿಸಿಕೊಂಡು ಮತ್ತೆ ಆಖಾಢಕ್ಕೆ ಸಿದ್ಧವಾಗುತ್ತೇವೆ ಎಂದ ಮಹೇಂದ್ರ ಸಿಂಗ್ ಧೋನಿ

Sampriya
ಭಾನುವಾರ, 3 ಆಗಸ್ಟ್ 2025 (12:11 IST)
Photo Credit X
ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಕಳೆದೆರಡು ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದೆ. ಎರಡೂ ಆವೃತ್ತಿಗಳಲ್ಲೂ ಪ್ಲೇಆಫ್‌ ಪ್ರವೇಶಿಸಲು ವಿಫಲವಾಗಿದೆ. ಇದಕ್ಕೆ ತಂಡದಲ್ಲಿರುವ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರು ಕಾರಣ ಬಿಚ್ಚಿಟ್ಟಿದ್ದಾರೆ.

ಕಳೆದೆರಡು ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನ ನೀಡಿದೆ ಎಂದು ಒಪ್ಪಿಕೊಂಡಿರುವ  ಧೋನಿ, ಮುಂದಿನ ಆವೃತ್ತಿಯಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಈ ಬಾರಿ ಕಣಕ್ಕಿಳಿಯಲಿದ್ದೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ತಂಡದಲ್ಲಿ ಕೆಲವೊಂದು ನ್ಯೂನತೆಗಳಿವೆ. ಅದನ್ನು ನಿಖರವಾಗಿ ಕಂಡುಹಿಡಿದು ಸರಿಪಡಿಸಬೇಕಿದೆ. ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನಿಸಲಿದ್ದೇವೆ ಎಂದು ತಂಡದ ಪರ ಬ್ಯಾಟಿಂಗ್‌ ನಡೆಸಿದರು. 

ಕಳೆದೆರಡು ಆವೃತ್ತಿಗಳಲ್ಲಿ ನಾವು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇದರಿಂದ ಪಾಠ ಕಲಿಯುವುದು ಮುಖ್ಯವೆನಿಸುತ್ತದೆ. ಎಲ್ಲಿ ತಪ್ಪಾಯಿತು ಎಂಬುದನ್ನು ಮನಗಂಡು ಸರಿಪಡಿಸಬೇಕಿದೆ. ಮುಂದಿನ ಆವೃತ್ತಿಯಲ್ಲಿ ತಂಡದ ನಾಯಕ ಋತುರಾಜ್ ಗಾಯಕವಾಡ್ ಆಗಮನದಿಂದ ಬ್ಯಾಟಿಂಗ್ ವಿಭಾಗದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ. 

ಕಳೆದ ಸಾಲಿನಲ್ಲಿ ಟೂರ್ನಿಯ ಮೊದಲಾರ್ಧದಲ್ಲಿ ಋತುರಾಜ್ ಗಾಯಗೊಂಡ ಪರಿಣಾಮ ಧೋನಿ ತಂಡದ ನಾಯಕತ್ವ ವಹಿಸಿದ್ದರು. 43 ವರ್ಷದ ಧೋನಿ ಅವರು ಐಪಿಎಲ್‌ಗೆ ಇನ್ನೂ ನಿವೃತ್ತಿ ಘೋಷಣೆ ಮಾಡಿಲ್ಲ.  <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

END vs IND Test: ನೈಟ್ ವಾಚ್ಮೆನ್ ಆಗಿ ಬಂದು ಮೊದಲ ಅರ್ಧ ಶತಕ ಸಿಡಿಸಿದ ಆಕಾಶದೀಪ್‌

IND vs ENG: ಆಕಾಶ್ ದೀಪ್ ಫಿಫ್ಟಿ ಹೊಡೆದಿದ್ದಕ್ಕೆ ಹೆಲ್ಮೆಟ್ ತೆಗಿ ಎಂದು ಸಿಗ್ನಲ್ ಕೊಟ್ಟ ಶುಭಮನ್ ಗಿಲ್

Video: ಗೆಳೆಯ ಪ್ರಸಿದ್ಧನಿಗಾಗಿ ಅಂಪಾಯರ್ ಜೊತೆ ಕಿತ್ತಾಟಕ್ಕಿಳಿದ ಕೆಎಲ್ ರಾಹುಲ್

Video: ಮಗಾ ಈ ಕಡೆಯಿಂದ ಹಾಕು ಸ್ವಲ್ಪ: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಟಿಪ್ಸ್ ಕೊಟ್ಟ ಕೆಎಲ್ ರಾಹುಲ್

Video: ಕೊಡು ಮಗಾ ಬ್ಲಷ್ ಮಾಡ್ತಾ ಇದ್ದಾನೆ.. ಕರುಣ್ ನಾಯರ್ ಗೆ ಚುಡಾಯಿಸಿದ ಪ್ರಸಿದ್ಧ

ಮುಂದಿನ ಸುದ್ದಿ
Show comments