Select Your Language

Notifications

webdunia
webdunia
webdunia
webdunia

ನಾಲ್ಕನೇ ಬಾರಿ ಕೋಲ್ಕತ್ತ ನೈಟ್‌ ರೈಡರ್ಸ್‌ ಫೈನಲ್‌ಗೆ: ತಂಡದ ಯಶಸ್ಸಿನ ಹಿಂದಿದ್ದಾರೆ ಗೌತಿ

Gautam Gambir

sampriya

ಕೋಲ್ಕತ್ತ , ಬುಧವಾರ, 22 ಮೇ 2024 (17:04 IST)
Photo By X
ಕೋಲ್ಕತ್ತ: ಕೋಲ್ಕತ್ತ ನೈಟ್​ರೈಡರ್ಸ್ ತಂಡವು ಐಪಿಎಲ್‌ನ ಮೊದಲ ಕ್ವಾಲಿಫೈಯರ್‌ನಲ್ಲಿ​ ಗೆದ್ದು ನಾಲ್ಕನೇ ಬಾರಿ  ಫೈನಲ್​ ಪ್ರವೇಶಿಸಿದೆ. ಇತ್ತ ಕೋಲ್ಕತ ಫೈನಲ್​ ಪ್ರವೇಶಿಸುತ್ತಿದ್ದಂತೆ ಮೆಂಟರ್​ ಗೌತಮ್​ ಗಂಭೀರ್ ಮತ್ತು ನಾಯಕ ಶ್ರೇಯಸ್​ ಅಯ್ಯರ್​  ಅವರಿಗೆ ತಂಡದ ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೋಲ್ಕತ್ತ ತಂಡದ ನಾಯಕರಾಗಿ ಎರಡು ಬಾರಿ ಟ್ರೋಫಿ ತಂದುಕೊಂಡಿದ್ದಾರೆ. ಪ್ರಸ್ತುತ ಅವರು ತಂಡದ ಮೆಂಟರ್‌ ಆಗಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

ಗೌತಿ ಕಳೆದ ವರ್ಷದವರೆಗೆ ಲಖನೌ ಸೂಪರ್‌ಜೈಂಟ್ಸ್‌ (ಎಲ್​ಎಸ್​ಜಿ) ತಂಡದ ಮೆಂಟರ್​ ಆಗಿದ್ದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್​) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್​ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಗೌತಿ ಬದಲಾಯಿಸಿದರು. ಸುನಿಲ್ ನಾರಾಯಣ್ ಅವರನ್ನು ಆರಂಭಿಕರಾಗಿ ಕಳುಹಿಸುವುದು ಮತ್ತು ಸತತ ವೈಫಲ್ಯಗಳ ನಡುವೆಯೂ ಮಿಚೆಲ್ ಸ್ಟಾರ್ಕ್ ಅವರನ್ನು ಮುಂದುವರಿಸುವುದು ಮುಂತಾದ ಅವರ ನಿರ್ಧಾರಗಳಾಗಿವೆ.

ಗೌತಮ್​ ಗಂಭೀರ್​ ನಾಯಕತ್ವದಲ್ಲಿ ಕೆಕೆಆರ್​ 2012 ಹಾಗೂ 14ರಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಇದೀಗ ಮತ್ತೊಮ್ಮೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಈ ಬಾರಿಯೂ ತಂಡ ಚಾಂಪಿಯನ್​ ಪಟ್ಟ ಅಲಂಕರಿಸುತ್ತ ಎಂದು ಕಾದು ನೋಡಬೇಕಿದೆ.

ಇನ್ನೂ ಪಂದ್ಯ ಶುರುವಾಗುವುದಕ್ಕೂ ಮುನ್ನ ಗೌತಮ್​ ಗಂಭೀರ್​ ಹೇಳಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಗಂಭೀರ್​ ಆಡಿರುವ ಈ ಮಾತುಗಳೇ ಕೆಕೆಆರ್​ ಯಶಸ್ವಿಯಾಗಿ ಫೈನಲ್​ ಪ್ರವೇಶಿಸಲು ಸ್ಫೂರ್ತಿ ನೀಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ:  ಐಪಿಎಲ್​ನಲ್ಲಿ ನೀವು ಅತ್ಯಂತ ಯಶಸ್ವಿ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದೀರಾ. ಟ್ರೋಫಿ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಎಲ್ಲಾ ಆಟಗಾರರನ್ನು ಸಮಾನವಾಗಿ ನೋಡಲಾಗುವುದು. ನಾವು ಇಂದಿನಿಂದ ಅಭಿಯಾನವನ್ನು ಆರಂಭಿಸುತ್ತೇವೆ. ನೀವು ದೈಹಿಕವಾಗಿ, ಮಾನಸಿಕವಾಗಿ, ಬುದ್ಧಿವಂತಿಕೆಯಿಂದ ಸಾಧ್ಯವಿರುವ ಎಲ್ಲವನ್ನೂ ನೀಡಿ. ನೀವು ಒಂದು ಯಶಸ್ವಿ ಫ್ರಾಂಚೈಸ್​ಅನ್ನು ಪ್ರತಿನಿಧಿಸುತ್ತಿದ್ದೀರಾ. ನಾನು ಸಂಪೂರ್ಣವಾಗಿ ನಂಬುವ ಒಂದು ವಿಷಯವೆಂದರೆ ಆಟಗಾರರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ನೀಡುವುದು ಎಂದು ಗೌತಮ್​ ಗಂಭೀರ್​ ಹೇಳಿರುವ ವಿಡಿಯೋ ಟ್ರೆಂಡ್​ ಆಗಿದೆ.

ಕೋಲ್ಕತ ನೈಟ್​ರೈಡರ್ಸ್​ ತಂಡವು ಇದುವರೆಗೆ ನಾಲ್ಕು ಬಾರಿ ಫೈನಲ್​ ಪ್ರವೇಶಿಸಿದೆ. ಮೂರನೇ ಬಾರಿ ಟ್ರೋಫಿ ಗೆಲ್ಲುತ್ತಾ ಎಂಬ ಪ್ರಶ್ನೆಗೆ ಮೇ 26ರಂದು ಉತ್ತರ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್‌ ಕೊಹ್ಲಿಗೆ ಬೆದರಿಕೆ, ನಾಲ್ವರ ಬಂಧನ: ಅಭ್ಯಾಸ ರದ್ದು ಮಾಡಿದ ಆರ್‌ಸಿಬಿ