Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಆಸ್ಪತ್ರೆಗೆ ದಾಖಲು: ಐಪಿಎಲ್ ನಿಂದ ಹೊರಕ್ಕೆ ಸಾಧ್ಯತೆ

webdunia
ಸೋಮವಾರ, 3 ಮೇ 2021 (10:31 IST)
ನವದೆಹಲಿ: ಐಪಿಎಲ್ 14 ರಲ್ಲಿ ಈಗಷ್ಟೇ ಗೆಲುವಿನ ಹಳಿಗೆ ಬಂದಿರುವ ಕಿಂಗ್ಸ್ ಪಂಜಾಬ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ ರೂಪದಲ್ಲಿ ಆಘಾತ ಸಿಕ್ಕಿದೆ.


ಕೆಎಲ್ ರಾಹುಲ್ ಗೆ ಅಪೆಂಡಿಸೈಟಿಸ್ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಮೊನ್ನೆ ರಾತ್ರಿ ಕೆಳ ಹೊಟ್ಟೆನೋವಿನಿಂದ ಬಳಲಿದ ರಾಹುಲ್ ರನ್ನು ಬ್ರೀಚ್ ಕ್ಯಾಂಡೀ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ಬಳಿಕ ಅವರಿಗೆ ಅಪೆಂಡಿಸೈಟಿಸ್ ಇರುವುದು ಪತ್ತೆಯಾಗಿದೆ. ಹೀಗಾಗಿ ಇದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಬೇಕಾಗುತ್ತದೆ. ಇದರಿಂದಾಗಿ ರಾಹುಲ್ ಐಪಿಎಲ್ 14 ರಿಂದಲೇ ಹೊರಬಿದ್ದರೂ ಅಚ್ಚರಿಯಿಲ್ಲ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಕೊರೋನಾಗೆ ಕೊಹ್ಲಿ ಏನೂ ಕೊಡುಗೆ ಕೊಟ್ಟಿಲ್ಲ ಎಂದವರಿಗೆ ಅನುಷ್ಕಾ ಶರ್ಮಾ ಉತ್ತರ