Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಅಮೋಘ ಬ್ಯಾಟಿಂಗ್: ಗುಜರಾತ್ ಲಯನ್ಸ್‌ಗೆ ನೈಟ್ ರೈಡರ್ಸ್ ವಿರುದ್ಧ ಜಯ

ಸುರೇಶ್ ರೈನಾ ಅಮೋಘ ಬ್ಯಾಟಿಂಗ್: ಗುಜರಾತ್ ಲಯನ್ಸ್‌ಗೆ ನೈಟ್ ರೈಡರ್ಸ್ ವಿರುದ್ಧ ಜಯ
ಕಾನ್ಪುರ , ಶುಕ್ರವಾರ, 20 ಮೇ 2016 (11:03 IST)
ಗುಜರಾತ್ ಲಯನ್ಸ್ ಆರಂಭದ 2 ವಿಕೆಟ್ ಪತನವನ್ನು ನೀಗಿಕೊಂಡು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ 2016ರ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ತಮ್ಮ ಪುತ್ರಿಯ ಜನನದ ಬಳಿಕ ಹಾಲೆಂಡ್‌ಗೆ ತೆರಳಿದ್ದ ಸುರೇಶ್ ರೈನಾ ಹಿಂದಿನ ಪಂದ್ಯ ಮಿಸ್ ಮಾಡಿಕೊಂಡಿದ್ದರು. ರೈನಾ ಅಜೇಯ 53 ರನ್ ಗಳಿಸಿ ತಂಡವನ್ನು 8ನೇ ಜಯದತ್ತ ಮುನ್ನಡೆಸಿದರು.

 ನೈಟ್ ರೈಡರ್ಸ್‌ನ 125 ರನ್ ಸಾಧಾರಣ ಮೊತ್ತ ಬೆನ್ನತ್ತಿದ ಲಯನ್ಸ್ ತಂಡವು ಆರಂಭದಲ್ಲೇ ಡ್ವೇನ್ ಸ್ಮಿತ್ ವಿಕೆಟ್ ಅನ್ನು ಮೊದಲ ಎಸೆತದಲ್ಲೇ ಕಳೆದುಕೊಂಡಿತು.  ಅವರ ಜತೆಗಾರ ಮೆಕಲಮ್ ಡಕ್‌ಔಟ್‌ಗೆ ಬಲಿಯಾದ ಬಳಿಕ ಲಯನ್ಸ್ 18 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.
 ನಾಯಕ ರೈನಾ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮೂರನೇ ವಿಕೆಟ್‌ಗೆ 20 ರನ್ ಸೇರಿಸಿ ಕಾರ್ತಿಕ್ ಮಾರ್ನ್ ಮಾರ್ಕೆಲ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. 
 
 ಕಾರ್ತಿಕ್ ಔಟಾದ ನಂತರ ಆಸ್ಟ್ರೇಲಿಯಾದ ಪವರ್ ಹಿಟ್ಟರ್ ಆರಾನ್ ಫಿಂಚ್(26) ನಾಲ್ಕನೇ ವಿಕೆಟ್‌ಗೆ 59 ರನ್ ರೈನಾ ಜತೆಗೆ ಕಲೆಹಾಕಿದರು. ಫಿಂಚ್ ಎರಡು ಭಾರೀ ಸಿಕ್ಸರುಗಳನ್ನು ಮತ್ತು ಬೌಂಡರಿಯೊಂದನ್ನು ಬಾರಿಸಿದರು.
 
 ತಂಡಕ್ಕೆ 61 ಎಸೆತಗಳಲ್ಲಿ 28 ರನ್ ಅಗತ್ಯವಾಗಿದ್ದು, ರವೀಂದ್ರ ಜಡೇಜಾ ನಾಯಕನ ಜೊತೆ ಸೇರಿ ಎಡಗೈ ಆಟಗಾರರಿಬ್ಬರು ಸ್ಕೋರನ್ನು ಪೂರ್ತಿ ಮಾಡಿದರು.
 
ಇದಕ್ಕೆ ಮುಂಚೆ ಬ್ಯಾಟಿಂಗ್ ಆಡಿದ್ದ  ನೈಟ್ ರೈಡರ್ಸ್ ತಂಡವನ್ನು ಗುಜರಾತ್ 8 ವಿಕೆಟ್‌ಗೆ 124 ರನ್‌ಗೆ ಕಟ್ಟಿ ಹಾಕಿತ್ತು. ನಾಲ್ಕನೇ ಓವರಿನಲ್ಲಿ ಬೌಲ್ ಮಾಡಲು ಬಂದ ಸ್ಮಿತ್ ಕೆಕೆಆರ್ ತಂಡವನ್ನು ಧೂಳೀಪಟ ಮಾಡಿದರು. ಅವರು ನಾಲ್ಕನೇ ವಿಕೆಟ್ ಪಡೆದಾಗ ನೈಟ್ ರೈಡರ್ಸ್ ಸ್ಕೋರು 11.3 ಓವರುಗಳಲ್ಲಿ 61 ರನ್‌ಗಳಾಗಿತ್ತು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ..

Share this Story:

Follow Webdunia kannada

ಮುಂದಿನ ಸುದ್ದಿ

ಆಶಿಶ್ ನೆಹ್ರಾಗೆ ಮಂಡಿ ರಜ್ಜು ಗಾಯ: ಐಪಿಎಲ್‌‌ನಿಂದ ಹೊರಕ್ಕೆ