Webdunia - Bharat's app for daily news and videos

Install App

IPL 2025: ಸನ್‌ರೈಸರ್ಸ್‌ ವಿರುದ್ಧ ಟಾಸ್‌ ಗೆದ್ದ ರಾಯಲ್ಸ್‌ ಬೌಲಿಂಗ್‌ ಆಯ್ಕೆ: ಹೊಡಿಬಡಿ ಆಟಕ್ಕೆ ಆಖಾಢ ರೆಡಿ

Sampriya
ಭಾನುವಾರ, 23 ಮಾರ್ಚ್ 2025 (15:26 IST)
ಹೈದರಾಬಾದ್‌: ಹೊಡಿಬಡಿ ಆಟಕ್ಕೆ ಹೆಸರಾಗಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಇಂದು ತವರಿನಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ರಾಜಸ್ಥಾನ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಹಾಲಿ ಚಾಂಪಿಯನ್‌ ಹೈದರಾಬಾದ್‌ ಬ್ಯಾಟಿಂಗ್‌ ಮಾಡಲಿದೆ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡ ಆತಿಥೇಯ ತಂಡವು ಬೃಹತ್‌ ಮೊತ್ತ ಕಲೆಹಾಕುವತ್ತ ಚಿತ್ತ ಹರಿಸಿದೆ.  ಗಾಯಾಳಾಗಿದ್ದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಹರ್ಷಲ್‌ ಪಟೇಲ್‌, ಸ್ಪಿನ್ನರ್ ಆ್ಯಡಂ ಜಂಪಾ ಅವರು ಬೌಲಿಂಗ್‌ ಶಕ್ತಿಯಾಗಿದ್ದಾರೆ.

ರಾಜಸ್ಥಾನ ತಂಡವನ್ನು ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್‌ ಪರಾಗ್‌ ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ನ ಜೋಸ್ ಬಟ್ಲರ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದರಿಂದ ಬ್ಯಾಟಿಂಗ್ ಬಲ ಕೊಂಚ ಕಡಿಮೆಯಾಗಿದೆ. ಹೀಗಾಗಿ, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ನಿತೀಶ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ರಾಜಸ್ಥಾನ ಮತ್ತು ಹೈದರಾಬಾದ್‌ ತಂಡಗಳು ಐಪಿಎಲ್‌ನಲ್ಲಿ ಒಟ್ಟು 20 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 11 ಬಾರಿ ಹೈದರಾಬಾದ್‌ ತಂಡ ಗೆದ್ದರೆ, 9 ಬಾರಿ ರಾಯಲ್ಸ್‌ ತಂಡ ಜಯಿಸಿದೆ. ಕಳೆದ ಆವೃತ್ತಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು ಎರಡೂ ಪಂದ್ಯದಲ್ಲೂ ಸನ್‌ರೈಸರ್ಸ್‌ ಪಾರಮ್ಯ ಮೆರೆದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ಮಿಂಚಿನ ಶತಕ ಸಿಡಿಸಿ ಅಬ್ಬರಿಸಿದ ವೈಭವ್‌ ಸೂರ್ಯವಂಶಿ: ಹಲವು ದಾಖಲೆಗಳು ಉಡೀಸ್‌

ಎನ್‌ಸಿ ಕ್ಲಾಸಿಕ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ಚೋಪ್ರಾ: ಜಾವೆಲಿನ್‌ ಹಬ್ಬದಲ್ಲಿ ಮಿಂದೆದ್ದ ಸಿಲಿಕಾನ್‌ ಸಿಟಿ ಮಂದಿ

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಮುಂದಿನ ಸುದ್ದಿ
Show comments