Webdunia - Bharat's app for daily news and videos

Install App

IPL 2025: 7 ಪಂದ್ಯ, 252 ರನ್, 24 ಭರ್ಜರಿ ಸಿಕ್ಸರ್‌: ಇದು 14ರ ಪೋರ ಸೂರ್ಯವಂಶಿ ಸಾಧನೆ

Sampriya
ಬುಧವಾರ, 21 ಮೇ 2025 (18:21 IST)
Photo Courtesy X
ನವದೆಹಲಿ: ಐಪಿಎಲ್ 2025ರ ಆವೃತ್ತಿಯಲ್ಲಿ ಕೇವಲ ನಾಲ್ಕು ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ಅಭಿಮಾನವನ್ನು ಕೊನೆಗೊಳಿಸಿದೆ. ಆವೃತ್ತಿಯ ಆರಂಭದಿಂದಲೂ ಹೆಣಗಾಡುತ್ತಿದ್ದ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿತು.

14 ವರ್ಷದ ಆಟಗಾರನಿಗೆ ರಾಯಲ್ಸ್ 1.2 ಕೋಟಿ ರೂಪಾಯಿಗಳನ್ನು ಪಾವತಿಸಿ ಮೆಗಾ ಹರಾಜಿನಲ್ಲಿ ಖರೀದಿಸಿದಾಗ ಅನೇಕರ ಹುಬ್ಬೇರಿತ್ತು. ವೈಭವ್ ಆಡಿರುವ ಕೇವಲ 7 ಪಂದ್ಯಗಳಲ್ಲಿ 206.55 ಸ್ಟ್ರೈಕ್‌ರೇಟ್‌ನಲ್ಲಿ 252 ರನ್ ಗಳಿಸಿದ್ದಾರೆ. ತಾವು ಎದುರಿಸಿದ 101 ಎಸೆತಗಳಲ್ಲಿ 24 ಸಿಕ್ಸರ್‌ಗಳನ್ನು ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ವೈಭವ್‌, ಅತ್ಯಂತ ವೇಗವಾಗಿ ಶತಕ ಗಳಿಕ ಭಾರತೀಯ ಆಟಗಾರ ಎನಿಸಿಕೊಂಡರು. ಮಂಗಳವಾರ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಅವರು 33 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.

ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ 14ರ ಪೋರ ವೈಭವ್ ಸೂರ್ಯವಂಶಿ ಅವರ ಅಬ್ಬರದ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗೆದ್ದು ಬೀಗಿದೆ.

ಚೆನ್ನೈ ತಂಡ ನೀಡಿದ 188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಅವರು ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಪಂದ್ಯದ ನಂತರ, ವೈಭವ್ ಎಂ.ಎಸ್. ಧೋನಿಯನ್ನು ಭೇಟಿಯಾದರು.  ಈ ವೇಳೆ ವೈಭವ್‌ ಅವರು ಧೋನಿಯ ಕಾಲಿಗೆರಗಿ ಆಶೀರ್ವಾದ ಪಡೆದರು.

 <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

ಮುಂದಿನ ಸುದ್ದಿ
Show comments