Publish Date: Wed, 11 May 2022 (08:30 IST)
Updated Date: Wed, 11 May 2022 (09:21 IST)
ಮುಂಬೈ: ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಗುಜರಾತ್ ಟೈಟನ್ಸ್ 62 ರನ್ ಗಳಿಂದ ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಟೂರ್ನಿಯಲ್ಲಿ ಟಾಪ್ ತಂಡಗಳಲ್ಲೊಂದಾಗಿದ್ದ ಲಕ್ನೋ ನಿನ್ನೆ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಶುಬ್ನಂ ಗಿಲ್ 63, ಡೇವಿಡ್ ಮಿಲ್ಲರ್ 26, ರಾಹುಲ್ ತೆವಾತಿಯಾ 22 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ರಾಹುಲ್ ಪಡೆ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯಿತು.13.5 ಓವರ್ ಗಳಲ್ಲಿ 82 ರನ್ ಗಳಿಗೆ ಆಲೌಟ್ ಆಯಿತು. ದೀಪಕ್ ಹೂಡಾ 27, ಕ್ವಿಂಟನ್ ಡಿ ಕಾಕ್ 11, ಆವೇಶ್ ಖಾನ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿವರದ್ದು ಸಿಂಗಲ್ ಡಿಜಿಟ್ ಸ್ಕೋರ್. ಗುಜರಾತ್ ಪರ ರಶೀದ್ ಖಾನ್ 4, ಯಶ್ ದಯಾಲ್, ಸಾಯ್ ಕಿಶೋರ್ ತಲಾ 2 ಮತ್ತು ಮೊಹಮ್ಮದ್ ಶಮಿ 1 ವಿಕೆಟ್ ಕಬಳಿಸಿದರು.