Webdunia - Bharat's app for daily news and videos

Install App

ಐಪಿಎಲ್ 14: ‘ಕ್ಯಾಪ್ಟನ್’ ವಿರಾಟ್ ಕೊಹ್ಲಿಗೆ ಸೋಲಿನ ವಿದಾಯ

Webdunia
ಮಂಗಳವಾರ, 12 ಅಕ್ಟೋಬರ್ 2021 (08:46 IST)
ದುಬೈ: ಐಪಿಎಲ್ 14 ರಲ್ಲೂ ಕಪ್ ಗೆಲ್ಲುವ ಕನಸು ವಿರಾಟ್ ಕೊಹ್ಲಿ ಪಾಲಿಗೆ ಕನಸಾಗಿಯೇ ಉಳಿಯಿತು. ನಿನ್ನೆಯ ಪ್ಲೇ ಆಫ್ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆರ್ ಸಿಬಿ 4 ವಿಕೆಟ್ ಗಳ ಸೋಲು ಅನುಭವಿಸಿತು.


ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಬಲಾಢ್ಯರೇ ಕೈಕೊಟ್ಟರು. ನಾಯಕ ಕೊಹ್ಲಿ 39, ದೇವದತ್ತ್ ಪಡಿಕ್ಕಲ್ 21 ರನ್ ಗಳಿಸಿದರು. ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 15, ಶ್ರಿಕರ್ ಭರತ್ 9, ಎಬಿಡಿ ವಿಲಿಯರ್ಸ್ 11 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದಾಗಿ ಆರ್ ಸಿಬಿಗೆ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 138 ರನ್ ಗಳಿಸಲಷ್ಟೇ ಶಕ್ತವಾಯಿತು. ಸುನಿಲ್ ನರೈನ್ 4 ವಿಕೆಟ್ ಕಬಳಸಿದರು.

ಈ ಸಾಧಾರಣ ಮೊತ್ತ ಬೆನ್ನತ್ತಲು ಕೆಕೆಆರ್ ತಿಣುಕಾಡವಾಗಬೇಕಾಯಿತು. ಶುಬ್ನಂ ಗಿಲ್ 29 ರನ್, ವೆಂಕಟೇಶ್ ಐಯರ್ 26 ರನ್, ನಿತೀಶ್ ರಾಣಾ 23, ಸುನಿಲ್ ನರೈನ್ 26 ರನ್ ಗಳಿಸಿದರು. ಅಂತಿಮ ಓವರ್ ನಲ್ಲಿ ಏಳು ರನ್ ಬೇಕಾಗಿತ್ತು. ಕೊನೆಗೆ 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಆರ್ ಸಿಬಿ ಐಪಿಎಲ್ 14 ರಿಂದ ಹೊರಬಿತ್ತು. ಕೊಹ್ಲಿ ಒಂದೇ ಒಂದು ಐಪಿಎಲ್ ಚಾಂಪಿಯನ್ ಶಿಪ್ ಗೆಲ್ಲದೇ ನಾಯಕತ್ವಕ್ಕೆ ವಿದಾಯ ಹೇಳುವಂತಾಯಿತು.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments