Webdunia - Bharat's app for daily news and videos

Install App

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

Sampriya
ಸೋಮವಾರ, 16 ಜೂನ್ 2025 (18:05 IST)
Photo Credit X
ಬಿಹಾರ: ಬಿಹಾರದ ಮುಜಫರ್‌ಪುರ ಜಿಲ್ಲೆಯ 13 ವರ್ಷದ ಅಯಾನ್ ರಾಜ್ ಎಂಬಾತ ಜಿಲ್ಲಾ ಕ್ರಿಕೆಟ್ ಲೀಗ್‌ನ ಅಂಡರ್-14 ಟೂರ್ನಮೆಂಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 

ಅಯಾನ್ ಅವರು ಲೀಗ್‌ನಲ್ಲಿ 327 ರನ್ ಬಾರಿಸುವ ಮೂಲಕ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ. ಅಯಾನ್ ಕೇವಲ 134 ಎಸೆತಗಳಲ್ಲಿ 41 ಬೌಂಡರಿಗಳು ಮತ್ತು 22 ಸಿಕ್ಸರ್‌ಗಳ ಸಹಿತ ತ್ರಿಶತಕ ಸಿಡಿಸಿದ್ದಾರೆ. 

ಪ್ರಸ್ತುತ 8 ನೇ ತರಗತಿ ಓದುತ್ತಿರುವ ಅಯಾನ್ ರಾಜ್ ಈ ಲೀಗ್‌ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಆಟಗಾರನಾಗಿದ್ದಾನೆ. ಈ ಸ್ಪರ್ಧೆಯಲ್ಲಿ ಇದಕ್ಕೂ ಮೊದಲು ಯಾವುದೇ ಆಟಗಾರ 300 ರನ್ ಗಳಿಸಲು ಸಾಧ್ಯವಾಗಿರಲಿಲ್ಲ. 

30 ಓವರ್‌ಗಳ ಪಂದ್ಯದಲ್ಲಿ ಸಂಸ್ಕೃತಿ ಕ್ರಿಕೆಟ್ ಅಕಾಡೆಮಿ ಪರ ಆಡಿದ ಅಯಾನ್ 134 ಎಸೆತಗಳನ್ನು ಎದುರಿಸಿ 244 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಅಯಾನ್ ಅವರ ಈ ಇನ್ನಿಂಗ್ಸ್‌ನಲ್ಲಿ, 296 ರನ್‌ಗಳು ಕೇವಲ ಬೌಂಡರಿ ಮತ್ತು ಸಿಕ್ಸರ್‌ನಿಂದ ಬಂದವು.  

ಈ ಸಾಧನೆಗೆ ತಮ್ಮ ಆಪ್ತ ಸ್ನೇಹಿತ ಮತ್ತು ಭಾರತ ಕ್ರಿಕೆಟ್‌ನ ನವತಾರೆ ವೈಭವ್ ಸೂರ್ಯವಂಶಿ ಅವರೇ ಪ್ರೇರಣೆ ಎಂದು ಅಯಾನ್‌ ಹೇಳಿದ್ದಾರೆ. ವೈಭವ್ ಭಾಯ್ ನನ್ನ ದೊಡ್ಡ ಸ್ಫೂರ್ತಿ. ನಾವು ಬಾಲ್ಯದಿಂದಲೂ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದೇವೆ. ಅವರು ಇಂದು ಭಾರತ ಕ್ರಿಕೆಟ್​ನಲ್ಲಿ ದೊಡ್ಡ ಹೆಸರು ಮಾಡಿದ್ದು, ನಾನು ಕೂಡ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇನೆ ಎಂದು ಅಯಾನ್‌ ಹೇಳಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments