Webdunia - Bharat's app for daily news and videos

Install App

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Krishnaveni K
ಸೋಮವಾರ, 16 ಜೂನ್ 2025 (11:15 IST)
Photo Credit: X
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಜೂನ್ 20 ರಿಂದ ಆರಂಭವಾಗಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಸಚಿನ್ ತೆಂಡುಲ್ಕರ್-ಆಂಡರ್ಸನ್ ಹೆಸರಿಡಲು ಬಿಸಿಸಿಐ ಮತ್ತು ಇಸಿಬಿ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಸಚಿನ್ ತಮ್ಮ ಹೆಸರು ಇಡಬೇಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಕೇಳಿದ್ರೆ ಹೆಮ್ಮೆ ಪಡ್ತೀರಿ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಗೆ ಎರಡೂ ದೇಶಗಳ ದಿಗ್ಗಜ ಕ್ರಿಕೆಟಿಗರಾದ ಸಚಿನ್, ಆಂಡರ್ಸನ್ ಹೆಸರನ್ನು ಇಡಲು ತೀರ್ಮಾನಿಸಲಾಗಿತ್ತು. ಆದರೆ ಇದರ ಬೆನ್ನಲ್ಲೇ ಸಚಿನ್ ತಮ್ಮ ಹೆಸರು ಬಳಸದೇ ಈ ಮೊದಲಿನಂತೇ ಪಟೌಡಿ ಟ್ರೋಫಿ ಎಂದು ಕರೆಯುವಂತೆ ಮನವಿ ಮಾಡಿದ್ದಾರೆ.

ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಪಟೌಡಿ ಹೆಸರಿನಲ್ಲಿ ಇದುವರೆಗೂ ಭಾರತ-ಇಂಗ್ಲೆಂಡ್ ಸರಣಿ ನಡೆಸಲಾಗುತ್ತಿತ್ತು. ಆದರೆ ಈಗ ಆ ದಿಗ್ಗಜರ ಹೆಸರು ಕಿತ್ತು ಹಾಕಿ ತಮ್ಮ ಹೆಸರು ಇಡುವುದು ಬೇಡ ಎಂದು ತೆಂಡುಲ್ಕರ್ ಮನವಿ ಮಾಡಿದ್ದಾರೆ. ಜೂನ 14 ರಂದು ತೆಂಡುಲ್ಕರ್-ಆಂಡರ್ಸನ್ ಟ್ರೋಫಿ ಅನಾವರಣಗೊಳಿಸಲು ತಯಾರಿ ನಡೆದಿತ್ತು. ಆದರೆ ಅಹಮದಾಬಾದ್ ನಲ್ಲಿ ವಿಮಾನ ದುರಂತವಾಗಿ ನೂರಾರು ಮಂದಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಅದ್ಧೂರಿ ಟ್ರೋಫಿ ಅನಾವರಣ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

IND vs ENG:ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಟಾಸ್ ಸೋಲುವುದರಲ್ಲೇ ದಾಖಲೆ

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ 3 ಬದಲಾವಣೆ ಖಚಿತ

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ಮುಂದಿನ ಸುದ್ದಿ
Show comments