Select Your Language

Notifications

webdunia
webdunia
webdunia
webdunia

ಡಿ ವಿಲಿಯರ್ಸ್ ಅಬ್ಬರದ 79 ರನ್ : ರಾಯಲ್‌ಗೆ ಗುಜರಾತ್ ವಿರುದ್ಧ ಜಯ

ಡಿ ವಿಲಿಯರ್ಸ್ ಅಬ್ಬರದ 79 ರನ್ : ರಾಯಲ್‌ಗೆ ಗುಜರಾತ್ ವಿರುದ್ಧ ಜಯ
ಬೆಂಗಳೂರು , ಬುಧವಾರ, 25 ಮೇ 2016 (00:05 IST)
ಬೆಂಗಳೂರು: ಎಬಿ ಡಿವಿಲಿಯರ್ಸ್ ಮತ್ತು ಇಕ್ಬಾಲ್ ಅಬ್ದುಲ್ಲಾ ಅವರ ಮನೋಜ್ಞ 91 ರನ್ ಜತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ ಮೊದಲ ಕ್ವಾಲಿಫೈಯರ್‌ನಲ್ಲಿ  ಗುಜರಾತ್ ಲಯನ್ಸ್ ವಿರುದ್ಧ ರೋಚಕ ಜಯ ಗಳಿಸಿದೆ. ಗುಜರಾತ್ ಲಯನ್ಸ್ 158 ರನ್‌ಗೆ ಉತ್ತರವಾಗಿ ವಿಕೆಟ್‌ಗಳನ್ನು ಒಂದರ ಹಿಂದೊಂದು ಕಳೆದುಕೊಂಡ ರಾಯಲ್ ಚಾಲೆಂಜರ್ಸ್ ಒಂದು  ಹಂತದಲ್ಲಿ 68 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆದರೆ ಡಿವಿಲಿಯರ್ಸ್ ತೀವ್ರ ಒತ್ತಡದಲ್ಲಿ ಆಡಿದರೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿ 47 ಎಸೆತಗಳಲ್ಲಿ 79 ರನ್ ಮಾಡಿದರು. ಅವರ ಸ್ಕೋರಿನಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದವು. ಇಕ್ಬಾಲ್ ಅಬ್ದುಲ್ಲಾ ಅವರು 25 ಎಸೆತಗಳಲ್ಲಿ 33 ರನ್ ಗಳಿಸಿದರು. ರಾಯಲ್ 158 ರನ್ ಗುರಿಯನ್ನು  18.2 ಓವರುಗಳಲ್ಲಿ ಮುಟ್ಟಿ ಗೆಲುವಿನ ದಡ ಸೇರಿತು.

ಗುಜರಾತ್ ಪರ ಧವಲ್ ಕುಲಕರ್ಣಿ 4 ವಿಕೆಟ್ ಕಬಳಿಸಿದರು. ರಾಯಲ್ ಪರ ಮೊದಲಿಗೆ ಸ್ಫೋಟಕ ಬ್ಯಾಟ್ಸ್ ಮನ್ ,ಕ್ರಿಸ್ ಗೇಲ್ ಬೇಗನೇ ಔಟಾದರು. ಗೇಲ್ ಮತ್ತು ಕೊಹ್ಲಿ ಇಬ್ಬರೂ ಕುಲಕರ್ಣಿಗೆ ಬೌಲ್ಡ್ ಆದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸನ್, ಇಕ್ಬಾಲ್ ಅಬ್ದುಲಾ ಮಾರಕ ಬೌಲಿಂಗ್ ದಾಳಿ: ಗುಜರಾತ್ ಲಯನ್ಸ್ 158ಕ್ಕೆ ಆಲೌಟ್