Select Your Language

Notifications

webdunia
webdunia
webdunia
webdunia

ಐಪಿಎಲ್ ಹರಾಜು: ಯಾರ್ಯಾರಿಗೆ ಎಷ್ಟೆಷ್ಟು?

ಐಪಿಎಲ್ ಹರಾಜು: ಯಾರ್ಯಾರಿಗೆ ಎಷ್ಟೆಷ್ಟು?
ಬೆಂಗಳೂರು , ಸೋಮವಾರ, 20 ಫೆಬ್ರವರಿ 2017 (12:49 IST)
ಬಹು ನಿರೀಕ್ಷಿತ ಐಪಿಎಲ್ 10ನೇ ಸೀಜನ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ಇಂದು ಬೆಂಗಳೂರಿನಲ್ಲಿ ಆರಂಭವಾಗಿದೆ. ಸ್ವದೇಶಿ ಮತ್ತು ವಿದೇಶಿ ಆಟಗಾರರು ಸೇರಿದಂತೆ ಒಟ್ಟು 351 ಆಟಗಾರರು ಹರಾಜಿನಲ್ಲಿದ್ದು ಒಟ್ಟು 8 ಫ್ರಾಂಚೈಸಿಗಳು ಪಾಲ್ಗೊಂಡಿವೆ.
ಸುಮಾರು 351 ಮಂದಿ ಆಟಗಾರರ ಪೈಕಿ 76 ಆಟಗಾರರನ್ನು ಮಾತ್ರ ಕೊಂಡು ಕೊಳ್ಳಬಹುದಾಗಿದೆ. 

ಈವರೆಗೆ (ಮುಂಜಾನೆ 11.30) ನಡೆದ ಹರಾಜಿನಲ್ಲಿ ಇಂಗ್ಲೆಂಡ್ ತಂಡ ಸ್ಪೋಟಕ ಬ್ಯಾಟ್ಸ್‌ಮನ್, ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬರೊಬ್ಬರಿ 14.5 ರುಗೆ ಪುಣೆ ತಂಡದ ಪಾಲಾಗಿದ್ದು, ಐಪಿಎಲ್ ಇತಿಹಾಸದಲ್ಲೇ 2ನೇ ಅತಿದೊಡ್ಡ ಮೊತ್ತಕ್ಕೆ ಹರಾಜು ಇದಾಗಿದೆ. 2014ರಲ್ಲಿ ಯುವರಾಜ್‌ ಸಿಂಗ್‌ರನ್ನು 2015ರಲ್ಲಿ ಡೆಲ್ಲಿ 16 ಕೋಟಿ ರೂಪಾಯಿ ಕೊಟ್ಟು ಖದೀರಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಹರಾಜಾದ ಆಟಗಾರರೊಬ್ಬರ ಅತಿದೊಡ್ಡ ಮೊತ್ತವಾಗಿತ್ತು. 
 
ಇಂಗ್ಲೆಂಡ್ ಕ್ರಿಕೆಟ್‌ ತಂಡದ ಎಡಗೈ ವೇಗದ ಬೌಲರ್‌ ಟೈಮಲ್‌ ಮಿಲ್ಸ್‌ ಅವರನ್ನು ಬರೋಬ್ಬರಿ 12 ಕೋಟಿ ರೂ. ಕೊಟ್ಟು ಆರ್‌ಸಿಬಿ ತಂಡ ಖರೀದಿಸಿದೆ.ಇಂಗ್ಲೆಂಡಿನ ವೇಗದ ಬೌಲರ್‌ನ ಮೂಲ ಬೆಲೆ ಕೇವಲ 50 ಲಕ್ಷ ರೂ. ಮಾತ್ರ ಇತ್ತು. 
 
ಬೆಳಿಗ್ಗೆ 11.30ರ ಅಂತ್ಯಕ್ಕೆ ಮಾರಾಟವಾದ ಪ್ರಮುಖ ಆಟಗಾರರು:
 
ಮುಂಬೈ ಇಂಡಿಯನ್ಸ್‌: ಕೆ. ಗೌತಮ್‌ (2 ಕೋಟಿ), ಮಿಷೆಲ್‌ ಜಾನ್ಸನ್‌ (2 ಕೋಟಿ), ನಿಕೊಲಸ್‌ ಪೂರನ್‌ (30 ಲಕ್ಷ)
 
 
ಕಿಂಗ್ಸ್‌ ಇಲೆವೆನ್‌ ಪಂಜಾಬ್‌: ಎಯೊನ್‌ ಮಾರ್ಗನ್‌ (2 ಕೋಟಿ), ರಾಹುಲ್ ತೇವಾಟಿಯಾ (25 ಲಕ್ಷ)
 
 
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಟೈಮಲ್‌ ಮಿಲ್ಸ್‌ (12 ಕೋಟಿ), ಪವನ್ ನೇಗಿ (1 ಕೋಟಿ)
 
 
ಕೋಲ್ಕತ್ತ ನೈಟ್ ರೈಡರ್ಸ್‌: ಟ್ರೆಂಟ್‌ ಬೌಲ್ಟ್‌ ( 5 ಕೋಟಿ)
 
ಡೆಲ್ಲಿ ಡೇರ್‌ಡೆವಿಲ್ಸ್: ಕಗಿಸೊ ರಬಾಡ (5 ಕೋಟಿ), ಪ್ಯಾಟ್ರಿಕ್‌ ಕಮಿನ್ಸ್‌ ( 4.5 ಕೋಟಿ), ಏಂಜೆಲೊ ಮ್ಯಾಥ್ಯೂಸ್ (2 ಕೋಟಿ), ಕೋರಿ ಆ್ಯಂಡರಸನ್‌ (1 ಕೋಟಿ), ಆದಿತ್ಯ ತಾರೆ (25 ಲಕ್ಷ) ಮತ್ತು ಅಂಕಿತ್‌ ಭಾವ್ನೆ (10 ಲಕ್ಷ).
 
 
ಸನ್‌ರೈಸರ್ಸ್‌ ಹೈದರಾಬಾದ್‌: ಏಕಲವ್ಯ ದ್ವಿವೇದಿ (75 ಸಾವಿರ), ಮೊಹಮ್ಮದ್‌ ನಬಿ (30 ಲಕ್ಷ), ತನ್ಮಯ್‌ ಅಗರವಾಲ್ (10 ಲಕ್ಷ)
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ ಡ್ರಾ