ಐಪಿಎಲ್ 13: ಆರ್ ಸಿಬಿ ಭರ್ಜರಿ ಬೇಟೆ

Webdunia
ಮಂಗಳವಾರ, 13 ಅಕ್ಟೋಬರ್ 2020 (09:05 IST)
ದುಬೈ: ಐಪಿಎಲ್ 13 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ದಿಗ್ವಿಜಯ ಸಾಧಿಸಿದೆ. ಕೆಕೆಆರ್ ವಿರುದ್ಧ ಭರ್ಜರಿ 82 ರನ್ ಗಳ ಗೆಲುವು ದಾಖಲಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ದೇವದತ್ತ್ ಪಡಿಕ್ಕಲ್, ಏರಾನ್ ಫಿಂಚ್ ಉತ್ತಮಆರಂಭ ಒದಗಿಸಿದರು. ಇವರು ಹಾಕಿಕೊಟ್ಟ ಅಡಿಪಾಯವನ್ನು ಮುಂದುವರಿಸಿಕೊಂಡು ಹೋದ ವಿರಾಟ್ ಕೊಹ್ಲಿ-ಎಬಿಡಿ ವಿಲಿಯರ್ಸ್ ಜೋಡಿ ಆರ್ ಸಿಬಿಗೆ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 194 ರನ್ ಗಳ ಬೃಹತ್ ಮೊತ್ತ ನೀಡಿದರು. ಇವರಲ್ಲಿ ಕೊಹ್ಲಿ ಸಾಥಿಯ ಪಾತ್ರ ನಿಬಾಯಿಸಿ 28 ಎಸೆತಗಳಲ್ಲಿ 33 ರನ್ ಗಳಿಸಿದರೆ ಎಬಿಡಿ ವಿಲಿಯರ್ಸ್ ಹೊಡೆಬಡಿಯ ಆಟವಾಡಿ ಕೇವಲ 33 ಎಸೆತಗಳಿಂದ 73 ರನ್ ಸಿಡಿಸಿದರು.

ಈ ಮೊತ್ತ ಬೆನ್ನತ್ತಿದ ಕೆಕೆಆರ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು. ಶಬ್ನಂ ಗಿಲ್ 34 ರನ್ ಗಳಿಸಿ ಔಟಾಗುತ್ತಿದ್ದಂತೇ ಕೆಕೆಆರ್ ಶರಣಾಗತಿ ಆರಂಭವಾಯಿತು. ಅಂತಿಮವಾಗಿ ಕೆಕೆಆರ್ 20 ಓವರ್ ಗಳಲ್ಲಿ ಕೇವಲ 112 ರನ್ ಗಳಿಗೆ ಆಲೌಟ್ ಆಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂದು ವೈಭವ್ ಸೂರ್ಯವಂಶಿ ಆಡೋದು ಡೌಟ್, ಎಲ್ಲದಕ್ಕೂ ಕನ್ನಡಿಗ ರಘು ಕಾರಣ Video

ವಿಶ್ವಕಪ್ ಹೀರೋಗೆ ಶಾಕ್: ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಗೆ ಕೊಕ್

ಅಟೋಗ್ರಾಫ್ ಗಾಗಿ ಅಭಿಮಾನಿ ಕೊಟ್ಟ ಪೆನ್ನು ಸರಿ ಇರಲಿಲ್ಲವೆಂದು ವೈಭವ್ ಸೂರ್ಯವಂಶಿ ಮಾಡಿದ್ದೇನು ಗೊತ್ತಾ Video

FIFA World cup ನಾರ್ವೆ ವಿರುದ್ಧ ಸೋತು ಬ್ರೆಜಿಲ್ ಹೊರಬೀಳುತ್ತಿದ್ದಂತೇ ಮೈದಾನದಲ್ಲೇ ಕಣ್ಣೀರು ಹಾಕಿದ ನೇಮಾರ್ ಜ್ಯೂನಿಯರ್ video

IND vs ENG: ಇವನ್ಯಾರು ಗುರೂ ನಾಯಿಗೆ ಹೊಡೆದಂಗೆ ಹೊಡೆದ್ರು.. ಇಂಗ್ಲೆಂಡ್ ಗೆಲ್ಲಿಸಿದ ರವಿ ಬಿಷ್ಣೋಯ್ ಫುಲ್ ಟ್ರೋಲ್ Video

ಮುಂದಿನ ಸುದ್ದಿ
Show comments