ಐಪಿಎಲ್: ತವರಿನಲ್ಲಿ ಸೋಲರಿಯದ ಸರದಾರ ಚೆನ್ನೈ ಸೂಪರ್ ಕಿಂಗ್ಸ್

Webdunia
ಬುಧವಾರ, 10 ಏಪ್ರಿಲ್ 2019 (07:50 IST)
ಚೆನ್ನೈ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕೊತ್ತಾ ನೈಟ್‍ ರೈಡರ್ಸ್ ನ್ನು 7 ವಿಕೆಟ್ ಗಳಿಂದ ಸೋಲಿಸಿದ್ದು, ಈ ಮೂಲಕ ತವರಿನಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ.


ಈ ಆವೃತ್ತಿಯಲ್ಲಿ ಏಕಮಾತ್ರ ಸೋಲು ಕಂಡಿರುವ ಚೆನ್ನೈ ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ಹೊಡೆಬಡಿಯ ಆಟಗಾರ ಆಂಡ್ರೂ ರಸೆಲ್ 44 ಎಸೆತಗಳಲ್ಲಿ 50 ರನ್ ಸಿಡಿಸಿದರು. ಚೆನ್ನೈ ಪರ ದೀಪಕ್ ಚಹರ್ 3, ಹರ್ಭಜನ್ ಸಿಂಗ್ ಮತ್ತು ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಕಬಳಿಸಿದರು.

ಈ ಮೊತ್ತವನ್ನು ಸರಾಗವಾಗಿ ಬೆನ್ನತ್ತಿದ್ದ ಚೆನ್ನೈ 16 ಎಸೆತಗಳು ಬಾಕಿ ಇರುವಂತೇ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸುವುದರೊಂದಿಗೆ 7 ವಿಕೆಟ್ ಗಳ ಜಯ ಸಾಧಿಸಿತು. ಚೆನ್ನೈ ಪರ ಫಾ ಡು ಪ್ಲೆಸಿಸ್ 43 ಮತ್ತು ಅಂಬಟಿ ರಾಯುಡು 21 ರನ್ ಗಳಿಸಿದರು. ಇದರೊಂದಿಗೆ ಈ ಆವೃತ್ತಿಯಲ್ಲಿ ಚೆನ್ನೈ ತವರಿನಲ್ಲಿ ಸೋಲರಿಯದ ಸರದಾರನಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Rohit Sharma: ರೋಹಿತ್ ಶರ್ಮಾ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ

19 ವರ್ಷಗಳ ಹಿಂದೆ ಸ್ನಾನ ಮಾಡಿದ್ದ ಮಗುವಿನ ವಿರುದ್ಧವೇ ಸೆಣಸಾಟಕ್ಕೆ ಸಜ್ಜಾದ ಲಯೊನೆಲ್‌ ಮೆಸ್ಸಿ

IND vs ENG: ಇದೊಂದು ವಿಡಿಯೋವೇ ರೋಹಿತ್ ಶರ್ಮಾ ನಿವೃತ್ತಿಯ ಸುಳಿವು ನೀಡಿರೋದು Video

IND vs ENG: ಲಾರ್ಡ್ಸ್ ಏಕದಿನ ಪಂದ್ಯವೇ ರೋಹಿತ್ ಶರ್ಮಾಗೆ ಕೊನೆಯ ಪಂದ್ಯವೇ

IND vs ENG: ಎಲ್ಲೋದ್ರು ಆ ರೋಹಿತ್ ಶರ್ಮಾ: ಫ್ಯಾನ್ಸ್ ಗೆ ಬೇಸರ ತಂದ ಹಿಟ್ ಮ್ಯಾನ್

ಮುಂದಿನ ಸುದ್ದಿ
Show comments