ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತ್ತು. ಈಗ ಸರಣಿಯೇನೋ ಮುಕ್ತಾಯವಾಗಿದೆ. ಆದರೆ ಆಸೀಸ್ ಕ್ರಿಕೆಟರುಗಳ ಜತೆ ಸ್ನೇಹ ಸಾಧ್ಯವಿಲ್ಲ ಎಂದಿದ್ದಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
ಮೈದಾನದ ಹೊರಗೆ ಮತ್ತು ಒಳಗೆ ಟಾರ್ಗೆಟ್ ಮಾಡಿ ಸ್ಲೆಡ್ಜಿಂಗ್ ಮಾಡಿದ ಆಸ್ಟ್ರೇಲಿಯನ್ ಆಟಗಾರರ ಜತೆ ಯಾವುದೇ ಕಾರಣಕ್ಕೂ ಸ್ನೇಹ ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಡಿಆರ್ ಎಸ್ ಚೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ನಡೆದ ವಾಗ್ಯುದ್ದದ ವಿಚಾರದಲ್ಲಿ ಆಸೀಸ್ ಮಾಧ್ಯಮಗಳು ಹಾಗೂ ಕ್ರಿಕೆಟ್ ಆಡಳಿತ ಮಂಡಳಿಯೂ ಟೀಂ ಇಂಡಿಯಾ ನಾಯಕನನ್ನು ಇನ್ನಿಲ್ಲದಂತೆ ಜರೆದಿದ್ದವು.
ಇದೆಲ್ಲಾ ಸರಿಯಾಗಬಹುದು. ಆಟದ ಒಂದು ಭಾಗವಷ್ಟೇ ಅಂದುಕೊಂಡಿದ್ದೆ. ಆದರೆ ಅದೆಲ್ಲಾ ನನ್ನ ತಪ್ಪು ಎಣಿಕೆಯಾಗಿತ್ತು. ಇನ್ಯಾವತ್ತೂ ನಾವು ಒಳ್ಳೆಯ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಕೊಹ್ಲಿ ಘೋಷಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ