ಬೆಂಗಳೂರು: ಗಾಯಗೊಂಡು ಐಪಿಎಲ್ ಪಂದ್ಯ ತಪ್ಪಿಸಿಕೊಂಡಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಜತೆಯಾಗಲು ಗೆಳತಿ ಅನುಷ್ಕಾ ಶರ್ಮಾ ಬೆಂಗಳೂರಿಗೆ ಬಂದಿದ್ದಾರೆ. ಮುಂದಿನ ಪಂದ್ಯದಲ್ಲಿ ಆಡುವುದನ್ನು ಎದುರು ನೋಡುತ್ತಿರುವ ಕೊಹ್ಲಿಗೆ ಗೆಳತಿ ಮಾಡಿದ್ದೇನು ಗೊತ್ತಾ?
ಗೆಳೆಯನಿಗೆ ಚಿಯರ್ ಅಪ್ ಮಾಡಲು ಅನುಷ್ಕಾ ರೆಡ್ ರೋಸ್ ನೀಡಿದರಂತೆ. ಹಾಗೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹಿಟ್ ಆಗಿದೆ. ಕೈಯಲ್ಲಿ ಕೆಂಗುಲಾಬಿ ಹಿಡಿದು ಕೊಹ್ಲಿ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಆದರೆ ನಿಜವಾಗಿಯೂ ಈ ರೆಡ್ ರೋಸ್ ಕೊಟ್ಟಿದ್ದಾರು ಎಂಬುದು ಸ್ಪಷ್ಟವಾಗಿಲ್ಲ. ಅಂತೂ ಅನುಷ್ಕಾ ಬಂದ ಕೂಡಲೇ ಕೊಹ್ಲಿ ಚೇತರಿಸಿಕೊಂಡು ಮುಂದಿನ ಪಂದ್ಯಕ್ಕೆ ಅಣಿಯಾಗಿರುವುದಂತೂ ನಿಜ. ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆಯಿರುತ್ತಾಳೆಂದು ಸುಮ್ಮನೇ ಹೇಳುತ್ತಾರೆಯೇ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ