Publish Date: Mon, 17 Apr 2017 (05:35 IST)
Updated Date: Mon, 17 Apr 2017 (09:42 IST)
ಬೆಂಗಳೂರು: ಪುಣೆ ತಂಡದ ವಿರುದ್ಧವೂ ಪಂದ್ಯ ಸೋತ ನಂತರ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿಪರೀತ ಕೋಪಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮಗೆ ಗೆಲ್ಲುವ ಅರ್ಹತೆಯೇ ಇರಲಿಲ್ಲ ಎಂದಿದ್ದಾರೆ.
‘ನಾವೂ ಹೀಗೇ ಆಡುತ್ತಿದ್ದರೆ, ಗೆಲ್ಲುವ ಅರ್ಹತೆಯೇ ಇರೋದಿಲ್ಲ. ಕಳೆದ ಪಂದ್ಯದಲ್ಲಾದರೂ ನಾವು ಕೊಂಚ ಹೋರಾಟ ನಡೆಸಿದ್ದೆವು. ಆದರೆ ಈ ಪಂದ್ಯದಲ್ಲಿ ಅದೂ ಇಲ್ಲ. ಶೀಘ್ರದಲ್ಲೇ ಗೆಲುವಿನ ಹಳಿಗೆ ಮರಳಬೇಕಿದೆ’ ಎಂದು ಕೊಹ್ಲಿ ಹೇಳಿದ್ದಾರೆ.
ಅಂಕ ಪಟ್ಟಿಯಲ್ಲಿ ತೀರಾ ಕೆಳಕ್ಕೆ ಜಾರಿರುವ ಆರ್ ಸಿಬಿ ಅಭಿಮಾನಿಗಳಿಗೆ ಮತ್ತು ಫ್ರಾಂಚೈಸಿಗೆ ನಿರಾಸೆಯಾಗದಂತೆ ಉತ್ತಮ ಆಟವಾಡುವ ಅಗತ್ಯ ನಮಗಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ