ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿಜಕ್ಕೂ ಇದು ಸಂಕಷ್ಟದ ಕಾಲ. ಐಪಿಎಲ್ ಸೀಸನ್-10ರಲ್ಲಿ ಆರ್ಸಿಬಿ ಆಡಿದ 13 ಪಂದ್ಯಗಳ ಪೈಕಿ 10ರಲ್ಲಿ ಹೀನಾಯ ಸೋಲನುಭವಿಸಿದೆ. ವಿಶ್ವ ಶ್ರೇಷ್ಠ ಬ್ಯಾಟ್ಸ್`ಮನ್`ಗಳಿದ್ದರೂ ಆರ್ಸಬಿ ತಂಡ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ. ಸ್ವತಃ ಕೊಹ್ಲಿ ಇಂತಹ ಸರಣಿ ಸೋಲನ್ನ ಎಂದೂ ಕಂಡಿರಲಿಲ್ಲ ಎಂದು ಹೇಳಿದ್ದರು.
ಇದೀಗ, ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆರ್ಸಿಬಿ ಅಭಿಮಾನಿಗಳ ಕ್ಷಮೆಕೋರಿದ್ದಾರೆ. ಬೇಷರತ್ತಾಗಿ ಪ್ರೀತಿ ಮತ್ತು ಬೆಂಬಲ ತೋರಿದ ಅಭಿಮಾನಿಗಳಿಗೆ ಧನ್ಯವಾದ. ನಮ್ಮ ಘನತೆಗೆ ತಕ್ಕ ಆಟವನ್ನ ನಾವು ಆಡಲಿಲ್ಲ. ನಮ್ಮನ್ನ ಕ್ಷಮಿಸಿಬಿಡಿ ಎಂದು ಟ್ವೀಟ್ ಮಾಡಿದ್ದಾರೆ.
2008ರಿಂದ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ 3 ಬಾರಿ ಫೈನಲ್`ಗೇರಿದ್ದ ಬಲಿಷ್ಠ ಆರ್ಸಿಬಿ ತಂಡ ಈ ಸರಣಿಯಲ್ಲಿ 2 ಪಂದ್ಯ ಗೆದ್ದು, 10ರಲ್ಲಿ ಸೋಲುಂಡಿದೆ. 10 ಸೀಸನ್`ಗಳಲ್ಲಿ ಇದು ಆರ್ಸಿಬಿಯ ಅತ್ಯಂತ ಕಳಪೆ ಸಾಧನೆಯಾಗಿದೆ. ಎಬಿಡಿ, ಗೇಲ್, ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್`ರಂತಹ ಅನುಭವಿ ಮತ್ತು ವಿಶ್ವಶ್ರೇಷ್ಠ ಆಟಗಾರರಿದ್ದರೂ ಆರ್ಸಿಬಿ ಸೋಲಿನ ಸುಳಿಗೆ ಸಿಲುಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ