Select Your Language

Notifications

webdunia
webdunia
webdunia
webdunia

ಐಪಿಎಲ್ ಮೊದಲ ಕದನದಲ್ಲಿ ಆರ್`ಸಿಬಿ-ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿ

ಐಪಿಎಲ್ ಮೊದಲ ಕದನದಲ್ಲಿ ಆರ್`ಸಿಬಿ-ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿ
ಹೈದ್ರಾಬಾದ್ , ಬುಧವಾರ, 5 ಏಪ್ರಿಲ್ 2017 (12:40 IST)
ಐಪಿಎಲ್ ಕ್ರಿಕೆಟ್ ಮಹಾಕದನಕ್ಕೆ ಇಂದು ಸಂಜೆ ರಣಕಹಳೆ ಮೊಳಗಲಿದೆ. ಹೈದ್ರಾಬಾದ್`ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಸನ ರೈಸರ್ಸ್ ಹೈದ್ರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಇದುವರೆಗೆ ಎರಡೂ ತಂಡಗಳು 9 ಬಾರಿ ಮುಖಾಮುಖಿಯಾಗಿದ್ದು, ಹೈದ್ರಾಬಾದ್ 5 ಮತ್ತು ಆರ್`ಸಿಬಿ 4 ಬಾರಿ ಗೆಲುವು ಸಾಧಿಸಿದೆ. ಕಳೆದ ಸೀಸನ್ನಿನಲ್ಲಿ ಸನ್ ರೈಸರ್ಸ್ 2 ಮತ್ತು ಬೆಂಗಳೂರು ತಂಡ ಒಂದು ಪಂದ್ಯದಲ್ಲಿ ಗೆದ್ದಿತ್ತು.

ಆರ್`ಸಿಬಿಗೆ ಗಾಯದ ಬರೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿಂದೆಂದೂ ಕಾಣದ ರೀತಿಯಲ್ಲಿ ಗಾಯದ ಸಮಸ್ಯೆ ಎದುರಿಸುತ್ತಿದೆ. ನಾಯಕ ಕೊಹ್ಲಿ, ಕೆ.ಎಲ್. ರಾಹುಲ್, ಡಿವಿಲಿಯರ್ಸ್ ಮತ್ತು ಸರ್ಫರಾಸ್ ಖಾನ್ ಗಾಯಾಳು ಪಟ್ಟಿಗೆ ಸೀರಿರುವುದು ನಾಯಕ ಶೇನ್ ವ್ಯಾಟ್ಸನ್`ಗೆ ನುಂಗಲಾರದ ತುತ್ತಾಗಿದೆ.

ಗೇಲ್ ಮೇಲೆ ಹೆಚ್ಚಿದ ಒತ್ತಡ: ಕೊಹ್ಲಿ, ಡಿವಿಲಿಯರ್ಸ್ ಹೊರಗುಳಿದಿರುವ ಹಿನ್ನೆಲೆಯಲ್ಲಿ ಆರಂಭಿಕ ಸ್ಫೋಟಕ ಆಟಗಾರ ಗೇಲ್ ಮೇಲೆ ಒತ್ತಡ ಹೆಚ್ಚಿದೆ. ಹೆಚ್ಚಿನ ಜವಾಬ್ದಾರಿಯುತವಾಗಿ ಗೇಲ್ ಬ್ಯಾಟ್ ಬೀಸಬೇಕಿದೆ. ಉಳಿದ ಆಟಗಾರರೂ ಸಹ ಸಾಮರ್ಥ್ಯಕ್ಕೆ ತಕ್ಕ ಆಟ ಆಡಬೇಕಿದೆ.

ಆರ್`ಸಿಬಿ ತಂಡ ಇಂತಿದೆ: ಕ್ರಿಸ್ ಗೇಲ್, ಮಂದೀಪ್ ಸಿಂಗ್, ಟ್ರೆವಿಸ್ ಹೆಡ್, ಶೇನ್ ವ್ಯಾಟ್ಸನ್, ಕೇದಾರ್ ಜಾಧವ್, ಸಚಿನ್ ಬೇಬಿ,  ಸ್ಟುವರ್ಟ್ ಬಿನ್ನಿ, ಪವನ್ ನೇಗಿ, ಯಜುವೇಂದ್ರ ಚಾಹಲ್, ಟೈಮಲ್ ಮಿಲ್ಸ್, ಅನಿಕೆತ್ ಚೌಧರಿ/ಹರ್ಶಲ್ ಪಟೇಲ್
 
ಬಲಿಷ್ಠ ಸನ್ ರೈಸರ್ಸ್ ಹೈದ್ರಾಬಾದ್:
ಬಾಂಗ್ಲಾ ವೇಗಿ ಮುಸ್ತಫಿಜೂರ್ ರೆಹಮಾನ್ ಹೊರಗುಳಿದಿರುವುದರಿಂದ ಹೈದ್ರಾಬಾದ್ ತಂಡಕ್ಕೆ ಕೊಂಚ ಹಿನ್ನಡೆಯಾದರೂ ಬಲಿಷ್ಠವಾಗಿಯೇ ಇದೆ. ಕಳೆದ ವರ್ಷ 158ಕ್ಕೂ ಕಡಿಮೆ ರನ್ ಗಳಿಸಿಯೂ 15 ಪಂದ್ಯಗಳ ಪೈಕಿ 12ರಲ್ಲಿ ಗೆದ್ದಿದೆ. ಆಶೀಶ್ ನೆಹ್ರಾ, ಭುವನೆಶ್ವರ್ ಕುಮಾರ್, ಟ್ರೆಂಟ್ ಬೋಲ್ಟ್`ರಂತಹ ಚಾನಾಕ್ಷ ವೇಗದ ಬೌಲಿಂಗ್ ಪಡೆ ತಂಡದ ಟ್ರಂಪ್ ಕಾರ್ಡ್.

ಯುವರಾಜ್ ಸಿಂಗ್ ಫಾರ್ಮ್`ನಲ್ಲಿಲ್ಲದಿರುವುದು ನಾಯಕ ಡೇವಿಡ್ ವಾರ್ನರ್ ತಲೆನೋವಾಗಿದೆ. ಶಿಖರ್ ಧವ್ನ್, ವಾರ್ನರ್, ದೀಪಕ್ ಹೂಡಾ, ಹೆನ್ರಿಕ್ಸ್ ಬ್ಯಾಟಿಂಗ್ ಬಲ ತುಂಬಿದ್ದಾರೆ.
ಹೈದ್ರಾಬಾದ್ ತಂಡ ಇಂತಿದೆ: ಡೇವಿಡ್ ವಾರ್ನರ್, ಶಿಖರ್ ಧವನ್, ಮೋಯ್ಸಸ್ ಹೆನ್ರಿಕ್ಸ್, ಯುವರಾಜ್ ಸಿಂಗ್, ದೀಪಕ್ ಹೂಡಾ, ನಮನ್ ಓಝಾ, ಬೆನ್ ಕಟಿಂಗ್ಸ್, ಬಿಪುಲ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಆಶೀಶ್ ನೆಹ್ರಾ

ಸಮಯ: ರಾತ್ರಿ 8 ಗಂಟೆಗೆ ಆರಂಭ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಐಪಿಎಲ್ 10 ಕ್ಕೆ ಚಾಲನೆ: ಏನೇನಿರುತ್ತೆ ಸ್ಪೆಷಲ್?!