ಧರ್ಮಶಾಲಾ: ಟೀಂ ಇಂಡಿಯಾ ಜತೆ ಟೆಸ್ಟ್ ಸರಣಿ ಆಡುವಾಗ ರಗಳೆ ಮಾಡಿಕೊಂಡು ಸಂಬಂಧ ಕೆಡಿಸಿಕೊಂಡಿದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಈಗ ಬೀರ್ ಕುಡಿಸಿ ಆಟಗಾರರ ಜತೆ ಸ್ನೇಹ ಹಸ್ತ ಚಾಚುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಜಿಂಕ್ಯಾ ರೆಹಾನೆಗೆ ಬೀರ್ ಪಾರ್ಟಿಗೆ ಆಹ್ವಾನವಿತ್ತ ಸ್ಟೀವ್, ಹೇಗಿದ್ದರೂ ನಾವಿಬ್ಬರು ಮುಂದಿನ ವಾರದಿಂದ ಐಪಿಎಲ್ ನಲ್ಲಿ ಒಂದೇ ತಂಡದಲ್ಲಿರಬೇಕು. ಯಾಕೆ ಬೇಕು ಈ ರಗಳೆ ಎಲ್ಲಾ. ಸಂತೋಷವಾಗಿರೋಣ ಎಂದು ಬೀರ್ ಪಾರ್ಟಿಗೆ ಆಹ್ವಾನವಿತ್ತಿದ್ದಾರೆ.
ಪಂದ್ಯ ಮುಗಿದ ಮೇಲೆ ರೆಹಾನೆ ಜತೆ ಕೆಲ ಕಾಲ ಸ್ಟೀವ್ ಮಾತುಕತೆಯನ್ನೂ ನಡೆಸಿ ವಾತಾವರಣ ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಆಸೀಸ್ ಆಟಗಾರರ ಜತೆ ಸ್ನೇಹ ಹಸ್ತ ಚಾಚುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ