Select Your Language

Notifications

webdunia
webdunia
webdunia
webdunia

ಧೋನಿ ಬಿಟ್ಟರೂ ಚೆನ್ನೈ ಸೂಪರ್ ಕಿಂಗ್ಸ್ ಬಿಡದ ಸಾಕ್ಷಿ

ಧೋನಿ ಬಿಟ್ಟರೂ ಚೆನ್ನೈ ಸೂಪರ್ ಕಿಂಗ್ಸ್ ಬಿಡದ ಸಾಕ್ಷಿ
ರಾಂಚಿ , ಮಂಗಳವಾರ, 11 ಏಪ್ರಿಲ್ 2017 (18:01 IST)
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಧೋನಿ ಹಣೆಬರಹ ಚೆನ್ನಾಗಿಲ್ಲ. ಭಾರತದ ತಂಡದ 3 ಮಾದರಿಯ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಬಳಿಕ ಐಪಿಎಲ್`ನ ಪುಣೆ ತಂಡದ ನಾಯಕನ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಧೋನಿಯನ್ನ ನಾಯಕತ್ವದಿಂದ ತೆಗೆದಿದ್ದಷ್ಟೇ ಅಲ್ಲದೆ ಮಾಲೀಕ ಸಂಜೀವ್ ಗೋಯೆಂಕಾ ಸಹೋದರ ಹರೀಶ್ ಗೋಯೆಂಕಾ  ಧೋನಿಗೆ ಟ್ವಿಟ್ಟರ್`ನಲ್ಲಿ ಅಪಮಾನವನ್ನೂ ಮಾಡಿದ್ದಾರೆ.
 

ಈ ಎಲ್ಲ ಪ್ರಹಸನಗಳಿಂದ ಬೇಸತ್ತಿರುವ ಧೋನಿ ಪತ್ನಿ ಸಾಕ್ಷಿ ಚೆನ್ನೈ ತಂಡವನ್ನ ನೆನಪಿಸಿಕೊಂಡಿದ್ದಾರೆ. ಧೋನಿ ಬಿಟ್ಟರೂ ಸಾಕ್ಷಿ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ಗುಂಗಿನಿಂದ ಹೊರಬಂದಿಲ್ಲ. ಚೆನ್ನೈ ತಂಡದ ಹಳದಿ ಹೆಲ್ಮೆಟ್ ತೊಟ್ಟು ಪೋಸ್ ಕೊಟ್ಟಿರುವ ಪೋಟೋವನ್ನ ಇನ್ ಸ್ಟಾಗ್ರಾಮ್`ನಲ್ಲಿ ಶೇರ್ ಮಾಡಿದ್ದಾರೆ.

ಸಾಕ್ಷಿಯ ಈ ಫೋಟೋ 2018ರ ಐಪಿಎಎಲ್ ಸೀಸನ್ನಿನ ಮುನ್ಸೂಚನೆ ಎನ್ನಲಾಗುತ್ತಿದೆ. ಚೆನ್ನೈ ತಂಡಕ್ಕೆ ವಿಧಿಸಿರುವ ನಿಷೇಧ ಈ ವರ್ಷ ಅಂತ್ಯವಾಗಲಿದ್ದು, ಮುಂದಿನ ಐಪಿಎಲ್`ಗೆ ಚೆನ್ನೈ ತಮಡ ರೀಎಂಟ್ರಿ ಖಚಿತ. ಈ ಬಗ್ಗೆ ಸ್ವತಃ ಶ್ರೀನಿವಾಸನ್ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್ ವಿರುದ್ಧ ಸ್ಫೋಟಕ ಆಟಕ್ಕೆ ಎಬಿಡಿಗೆ ಸ್ಫೂರ್ತಿ ತುಂಬಿದ್ದೇ ಪತ್ನಿ