ಮುಂಬೈ: ಮೈದಾನದಲ್ಲಿ ಅಶಿಸ್ತಿನ ವರ್ತನೆ ತೋರಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ವಾಗ್ದಂಡನೆ ಶಿಕ್ಷೆ ನೀಡಲಾಗಿದೆ.
ಕೋಲ್ಕೊತ್ತಾ ವಿರುದ್ಧದ ಪಂದ್ಯದಲ್ಲಿ ಅಂಪಾಯರ್ ತಪ್ಪಾಗಿ ಎಲ್ ಬಿಡಬ್ಲ್ಯು ತೀರ್ಪು ನೀಡಿದ್ದಕ್ಕೆ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದರು. ಔಟಾಗಿ ಹೊರ ನಡೆಯುವಾಗ ರೋಹಿತ್ ಕೋಪದಿಂದ ಅಂಪಾಯರ್ ಕಡೆಗೆ ಬ್ಯಾಟ್ ತೋರಿ ಅನುಚಿತವಾಗಿ ವರ್ತಿಸಿದ್ದರು.
ಈ ಘಟನೆ ಬಗ್ಗೆ ವಿಚಾರಣೆ ನಡೆಸಿದ ಮ್ಯಾಚ್ ರೆಫರಿ ರೋಹಿತ್ ಗೆ ಮಾತಿನಲ್ಲಿ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ಧೋನಿ ಕೂಡಾ ಡಿಆರ್ ಎಸ್ ಗೆ ಮನವಿ ಮಾಡುವಂತೆ ಸನ್ನೆ ಮಾಡಿ ರೆಫರಿಯಿಂದ ಎಚ್ಚರಿಕೆ ಪಡೆದಿದ್ದರು. ಇದೀಗ ಮುಂಬೈ ನಾಯಕನ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ