Publish Date: Thu, 06 Apr 2017 (08:24 IST)
Updated Date: Thu, 06 Apr 2017 (08:27 IST)
ಹೈದರಾಬಾದ್: ಕಳೆದ ಐಪಿಎಲ್ ನಲ್ಲಿ ಅನುಭವಿಸಿದ ನಿರಾಸೆ ಮತ್ತೊಮ್ಮೆ ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್ ಸಿಬಿ ತಂಡಕ್ಕೆ ಎದುರಾಯಿತು. ಇನ್ನೇನು ಗೆಲುವು ಸಿಕ್ಕಿತು ಎನ್ನುವಾಗ ಮುಗ್ಗರಿಸಿತು.
10 ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಕೇವಲ 35 ರನ್ ಗಳಿಂದ ಸೋಲನುಭವಿಸಿತು. ಗೆಲುವಿಗೆ 207 ರನ್ ಚೇಸ್ ಮಾಡುವಾಗ ವಿರಾಟ್ ಕೊಹ್ಲಿ ಇದ್ದಿದ್ದರೆ, ಪಂದ್ಯದ ಚಿತ್ರಣ ಬದಲಾಗುತ್ತಿತ್ತೇನೋ.
ಆದರೂ ಕೇದಾರ್ ಜಾದವ್ 33 ರನ್ ಗಳಿಸಿದ್ದಾಗ ರನೌಟ್ ಆಗದೇ ಇದ್ದಿದ್ದರೆ, ಬಹುಶಃ ಪಂದ್ಯ ಆರ್ ಸಿಬಿ ಪಾಲಾಗುತ್ತಿತ್ತು. ಆದರೆ ದುರದೃಷ್ಟ ನೋಡಿ. ಜಾದವ್ ವಿಕೆಟ್ ಕಳೆದುಕೊಂಡ ಮೇಲೆ ಇನ್ಯಾರೂ ಗೆಲ್ಲುವ ಪ್ರಯತ್ನ ನಡೆಸಲಿಲ್ಲ. 172 ರನ್ ಗಳಿಗೆ ಆಲೌಟ್ ಆಯಿತು.
ಯುವರಾಜ್ ಸಿಂಗ್ ಮತ್ತೊಮ್ಮೆ ಹೀರೋ ಆದರು. ಅವರು 27 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಗಳ 62 ರನ್ ಸಿಡಿಸಿ ಅಬ್ಬರಿಸಿದರು. ಆಫ್ಘನ್ ಆಟಗಾರ ರಶೀದ್ ಖಾನ್ ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದರಲ್ಲದೆ, 2 ವಿಕೆಟ್ ಕಿತ್ತು ಗಮನ ಸೆಳೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ