Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಆಟಗಾರರು ಇನ್ನು ಐಪಿಎಲ್ ಆಡಲ್ಲ?!

ಐಪಿಎಲ್
Melbourne , ಶುಕ್ರವಾರ, 12 ಮೇ 2017 (07:21 IST)
ಮೆಲ್ಬೋರ್ನ್: ಮುಂದಿನ ವರ್ಷದ ಐಪಿಎಲ್ ನಿಂದ ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಹೊರಗುಳಿಯಲಿದ್ದಾರಾ? ಹಾಗೊಂದು ಅನುಮಾನಗಳು ಕಾಡುತ್ತಿವೆ.

 
ಅದಕ್ಕೆ ಕಾರಣವೂ ಇದೆ. ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಹೊಸ ಗುತ್ತಿಗೆ ಒಪ್ಪಂದ ಮಾಡಿಕೊಂಡು ಆ ಹೆಸರಿನಲ್ಲಿ ತಮ್ಮ ದೇಶದ ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್,  ಜೋಶ್ ಹೇಝಲ್ ವುಡ್ ಮತ್ತು ಪ್ಯಾಟ್ ಕ್ಯುಮಿನ್ ರನ್ನು ಐಪಿಎಲ್ ಆಡದಂತೆ ತಡೆಯಲು ಲೆಕ್ಕಾಚಾರ ನಡೆಸಿದೆ ಎಂದು ಮೂಲಗಳು ಹೇಳಿವೆ.

ಪ್ರಸಕ್ತ ಆಸ್ಟ್ರೇಲಿಯಾ ಆಟಗಾರರಿಗೆ ಒಂದು ವರ್ಷದ ಒಪ್ಪಂದ ನೀಡಲಾಗುತ್ತಿದೆ. ಇದರ ಬದಲಿಗೆ ಮೇಲೆ ಹೇಳಿದ ಪ್ರಮುಖ ಆಟಗಾರರಿಗೆ ಬಹುವರ್ಷದ ಗುತ್ತಿಗೆಗೆ ಸಹಿ ಹಾಕಿಸಿಕೊಂಡು ಏಪ್ರಿಲ್-ಮೇ ತಿಂಗಳಿನಲ್ಲಿ ರೆಸ್ಟ್ ನೀಡುವ ಯೋಜನೆ ಕ್ರಿಕೆಟ್ ಆಸ್ಟ್ರೇಲಿಯಾಗಿದೆಯಂತೆ.

ಅದರಂತೆ ಆದರೆ ಐಪಿಎಲ್ ಆಡುವ ಸಮಯದಲ್ಲಿ ಆಟಗಾರರು ಕಡ್ಡಾಯವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಹಾಗೊಂದು ವೇಳೆ ಆದರೆ ಆಸ್ಟ್ರೇಲಿಯಾದ ಈ ಪ್ರಮುಖ ಆಟಗಾರರು, ಐಪಿಎಲ್ ನಲ್ಲಿ ಸಿಗುವ ದುಪ್ಪಟ್ಟು ಸಂಭಾವನೆಯನ್ನು ಕಳೆದುಕೊಂಡು ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ನೀಡುವ ವಾರ್ಷಿಕ ಸಂಭಾವನೆಯನ್ನೇ ನೆಚ್ಚಿಕೊಳ್ಳಬೇಕಾಗಬಹುದು.

ಅಲ್ಲದೆ ಈ ಎಲ್ಲಾ ಆಟಗಾರರು ಐಪಿಎಲ್ ನಲ್ಲಿ ತಮ್ಮ ತಮ್ಮ ತಂಡದ ಆಧಾರ ಸ್ತಂಬಗಳಾಗಿದ್ದು, ಫ್ರಾಂಚೈಸಿಗಳಿಗೂ ಭಾರೀ ನಷ್ಟವಾಗಲಿದೆ. ಆದರೆ ಇದೆಲ್ಲಾ ಆಟಗಾರರಿಗೆ ವಿಶ್ರಾಂತಿ ಒದಗಿಸುವ ಉದ್ದೇಶದಿಂದಷ್ಟೇ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಮೊದಲೇ ಟೀಂ ಇಂಡಿಯಾ ತಾಕತ್ತು ಬಯಲು!