ಪುಣೆ: ಟೀಂ ಇಂಡಿಯಾ ಮಾಜಿ ನಾಯಕ, ಪುಣೆ ಸೂಪರ್ ಜೈಂಟ್ ಆಟಗಾರ ಎಂಎಸ್ ಧೋನಿ ಮೇಲೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಮೈದಾನದ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಮ್ಯಾಚ್ ರೆಫರಿ ದೂರು ನೀಡಿದ್ದಾರೆ.
ಈ ಪಂದ್ಯದಲ್ಲಿ ಡಿಆರ್ ಎಸ್ ಇಲ್ಲದಿದ್ದರೂ, ಧೋನಿ ಒಂದು ತೀರ್ಪಿಗೆ ಡಿಆರ್ ಎಸ್ ಗೆ ಮನವಿ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ದೂರಿನಲ್ಲಿ ಪ್ರಕರಣ ಯಾವುದೆಂಬ ಸ್ಪಷ್ಟ ಉಲ್ಲೇಖವಿಲ್ಲದಿದ್ದರೂ, ಇದೇ ಕಾರಣಕ್ಕೆ ಧೋನಿ ವಿರುದ್ಧ ಪ್ರಕರಣ ದಾಖಲಾಗಿರಬಹುದೆಂದು ಊಹಿಸಲಾಗಿದೆ.
ಮೈದಾನದಲ್ಲಿ ಪಂದ್ಯದ ನೀತಿ ಮತ್ತು ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಪಂದ್ಯದ ಸ್ಪರ್ಧಾತ್ಮಕ ಮನೋಭಾವಕ್ಕೆ ಕುತ್ತು ತಂದಿದ್ದಾರೆಂದು ಅವರ ಮೇಲೆ ರೆಫರಿ ಆರೋಪ ಹೊರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ