Select Your Language

Notifications

webdunia
webdunia
webdunia
webdunia

ಪುಣೆ-ಪಂಜಾಬ್`ಗೆ ನಿರ್ಣಾಯಕ ಪಂದ್ಯ: ಗೆದ್ದವರು ಪ್ಲೇಆಫ್ಸ್`ಗೆ ಸೋತವರು ಮನೆಗೆ

ಪುಣೆ-ಪಂಜಾಬ್`ಗೆ ನಿರ್ಣಾಯಕ ಪಂದ್ಯ: ಗೆದ್ದವರು ಪ್ಲೇಆಫ್ಸ್`ಗೆ ಸೋತವರು ಮನೆಗೆ
ಪುಣೆ , ಭಾನುವಾರ, 14 ಮೇ 2017 (09:44 IST)
ಪುಣೆಯಲ್ಲಿ ನಡೆಯಲಿರುವ ಐಪಿಎಲ್`ನ ನಿರ್ಣಾಯಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಪುಣೆಸೂಪರ್ ಜಾಯಿಂಟ್ ತಂಡಗಳು ಸೆಣೆಸಲಿವೆ. ಐಪಿಎಲ್`ನ ಅತ್ಯಂತ ಪ್ರಮುಖ ಪಂದ್ಯ ಇದಾಗಿದ್ದು, ಈ ಪಂದ್ಯದಲ್ಲಿಯೇ ಈ ಎರಡೂ ತಂಡಗಳ ಪ್ಲೇಆಫ್ಸ್ ಭವಿಷ್ಯ ನಿರ್ಧಾರವಾಗಲಿದೆ.
  

13 ಪಂದ್ಯಗಳಲ್ಲಿ 8 ಅನ್ನು ಗೆದ್ದು ಪುಣೆ ತಂಡ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ ಕಿಂಗ್ಸ್ ಇಲೆವೆನ್ ಪಂಜಾಬ್ 13ರಲ್ಲಿ 7 ಪಂದ್ಯ ಗೆದ್ದು 14 ಅಂಕಗಳೊಂದಿಗೆ 5 ಸ್ಥಾನದಲ್ಲಿದೆ. ಇವತ್ತಿನ ಪಂದ್ಯ ಗೆದ್ದ ತಂಡ ಬಹುತೇಕ 4ನೇ ತಂಡವಾಗಿ ಪ್ಲೇಆಫ್ಸ್`ಗೆ ಎಂಟ್ರಿಯಾಗಲಿದೆ.
 ಒಂದೊಮ್ಮೆ ಪಂಜಾಬ್ ಈ ಪಂದ್ಯ ಗೆದ್ದರೆ 16 ಅಂಕ ಗಳಿಸಲಿದೆ. ಆಗ ಪುಣೆ ಮತ್ತು ಪಂಜಾಬ್ ಎರಡೂ ತಂಡಗಳ ಅಂಕಗಳು ಸಮನವಾದರೂ ರನ್ ರೇಟ್ ಉತ್ತಮವಾಗಿರುವ ಪಂಜಾಬ್ ಪ್ಲೇಆಫ್ಸ್`ಗೆ ಎಂಟ್ರಿಯಾಗಲಿದೆ. ಪುಣೆಯ ರನ್ ರೇಟ್ ಉತ್ತಮವಾಗಿದ್ದಿದ್ದರೆ ಈ ಪಂದ್ಯಕ್ಕೆ ಅಷ್ಟು ಮಹತ್ವವಿರುತ್ತಿರಲಿಲ್ಲ. ಾದರೆ, ರನ್ ರೇಟ್ ಕಡಿಮೆ ಹೊಂದಿರುವ ಪುಣೆ ತಂಡ ಪ್ಲೇಆಫ್ಸ್ ಎಂಟ್ರಿಗೆ ಈ ಪಂದ್ಯ ಗೆಲ್ಲಲೇಬೇಕಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಗೆಲುವಿನ ಸನಿಹದಲ್ಲಿ ಕೈಚೆಲ್ಲಿದ ಪುಣೆ ಇಲ್ಲಿ ಡು ಆರ್ ಡೈ ಸ್ಥಿಗೆ ಬಂದು ನಿಂತಿದೆ. ಬೆನ್ ಸ್ಟೋಕ್ಸ್, ಸ್ಮಿತ್, ಧೋನಿ, ರಹಾನೆ, ಶಾರ್ದೂಲ್ ಠಾಕೂರ್`ರಂತಹ ಘಟಾನುಘಟಿಗಳ ದಂಡೇ ಪುಣೆಯಲ್ಲಿದೆ. ಪಂಜಾಬ್ ಸಹ ಕಡಿಮೆ ಇಲ್ಲ. ಗ್ಲೇನ್ ಮ್ಯಾಕ್ಸ್`ವೆಲ್, ಸಹಾ, ಸಂದೀಪ್ ಶರ್ಮಾ, ಅಕ್ಷರ್ ಪಟೇಲ್. ಹಶೀಮ್ ಆಮ್ಲಾರಂತಹ ಮ್ಯಾಚ್ ವಿನ್ನರ್`ಗಳಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವುದರಿಂದ ಪುಣೆ ತಂಡಕ್ಕೆ ತವರಿನ ಸಪೋರ್ಟ್ ಸಿಗಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಬಹುದಾಗಿದೆ. ಸಂಜೆ 4 ಗಂಟೆಗೆ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾ ವಿರುದ್ಧ ಗೆದ್ದು ಪ್ಲೇಆಫ್ಸ್ ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್