Webdunia - Bharat's app for daily news and videos

Install App

ಐಪಿಎಲ್: ಪುಣೆ-ಮುಂಬೈ ಪಂದ್ಯದಲ್ಲಿ ನಿಮ್ಮ ಫೇವರಿಟ್ ಯಾರು?

Webdunia
ಗುರುವಾರ, 6 ಏಪ್ರಿಲ್ 2017 (09:46 IST)
ಪುಣೆ: ಒಂದೆಡೆ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್! ಇನ್ನೊಂದು ತುದಿಯಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಪ್ರಬಲ ಪುಣೆ ಸೂಪರ್ ಜೈಂಟ್ ಗಳು! ಇವರಲ್ಲಿ ನಿಮ್ಮ ಫೇವರಿಟ್ ಯಾರು?

 

ಪುಣೆ ತಂಡಕ್ಕೆ ಇದೊಂಥರಾ ಅಗ್ನಿ ಪರೀಕ್ಷೆ. ಇದುವರೆಗೆ ನಾಯಕರಾಗಿದ್ದ ಧೋನಿ ಸ್ಥಾನಕ್ಕೆ ಈ ಬಾರಿ ಸ್ಟೀವ್ ಸ್ಮಿತ್ ಬಂದಿದ್ದಾರೆ. ಹೊಸ ನಾಯಕನೊಂದಿಗೆ ಕಣಕ್ಕಿಳಿಯುತ್ತಿರುವ ಪುಣೆಗೆ ಅಜಿಂಕ್ಯಾ ರೆಹಾನೆ, ಬೆನ್ ಸ್ಟೋಕ್ಸ್, ಫಾ ಡು ಪ್ಲೆಸಿಸ್ ರಂತಹ ಘಟಾನುಘಟಿ ನಾಯಕರ ಬಲವಿದೆ. ವಿಕೆಟ್ ಹಿಂದುಗಡೆ ಸಾರಥಿಯಾಗಿ ಧೋನಿಯಿರುವಾಗ ಪುಣೆ ತಂಡಕ್ಕೆ ಗೆಲ್ಲಲು ಇನ್ನೇನು ಬೇಕು?

 
ಅತ್ತ ಮುಂಬೈ ಕೂಡಾ ಕಮ್ಮಿಯೇನಲ್ಲ. ಗಾಯದಿಂದ ಚೇತರಿಸಿಕೊಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಕನ್ನಡಿಗರಾದ ಕೆ.ಗೌತಮ್ ಮತ್ತು ಶ್ರೇಯಾಸ್ ಗೋಪಾಲ್ ಹಾಗೂ ವಿನಯ್ ಕುಮಾರ್ ತಂಡದಲ್ಲಿದ್ದಾರೆ. ಹೀಗಾಗಿ ಕನ್ನಡಿಗರ ಒಲವು ಮುಂಬೈ ಪರ ವಾಲಬಹುದು. ಇವರ ಹೊರತಾಗಿ ಹರ್ಭಜನ್ ಸಿಂಗ್,  ಲಸಿತ್ ಮಾಲಿಂಗ ತಂಡದ ಪ್ರಮುಖ ಆಟಗಾರರು. ಜತೆಗೆ ಮುಂಬೈಗೆ ಮಹೇಲಾ ಜಯವರ್ಧನೆ ರೂಪದಲ್ಲಿ ಹೊಸ ಗುರುವಿನ ಮಾರ್ಗದರ್ಶನವಿದೆ.

 
ಪುಣೆ ಬೌಲಿಂಗ್ ನಲ್ಲಿ ಕೊಂಚ ದುರ್ಬಲ. ಹೀಗಾಗಿ ಎಲ್ಲಾ ಫಿಟ್ ಆಟಗಾರರನ್ನು ಹೊಂದಿದ ಮುಂಬೈ ಬಲಾಢ್ಯ ಬ್ಯಾಟಿಂಗ್ ಕಟ್ಟಿಹಾಕಲು ಕೊಂಚ ಪರಿಶ್ರಮ ಪಡಬೇಕಾದೀತು. ಈ ತಂಡದಲ್ಲಿ ಎಲ್ಲರ ಕಣ್ಣು ದುಬಾರಿ ಬೆಲೆಗೆ ಮಾರಾಟವಾದ ಆಲ್ ರೌಂಡರ್ ಬೆನ್ ಸ್ಟೋಕ್. ಹಾಗಿದ್ದರೂ, ಯಾರು ಸಿಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments